ವಸಂತ ಮಾಸವು ಸಡಗರದಿ ಬಂತು
ಕೋಗಿಲೆಗಾನದ ಜೊತೆ ಬಿಸಿಲದಗೆಯನು ತಂತು
ಪೂರ್ಣವಿರಾಮವಿಲ್ಲದ ಕೆಲಸದಲಿ
ಉರಿಯಿದು ಹೆಚ್ಚಾಯ್ತು ದೇಹದಲಿ ||
ಸೆಕೆಯನು ತಾಳಲಾಗದೆ ಅರಸಿದರು
ನೀರಿನ ಕೊಳವನು ಮುಳುಗಲು
ವಸ್ತ್ರವೆಲ್ಲ ಒದ್ದೆಯಾಯ್ತು ಹನಿಯಿಂದ
ಮೈಮೇಲೆ ಸುರಿಯುವ ಬೆವರಿನ ಮಳೆಯಿಂದ ||
ಎಲ್ಲರು ಅರಸುತ ಹೊರಟರು
ತಂಪಿನ ಕೋಣೆಯ ಕಡೆಗೆ
ದೇಹ ತಣಿಯದೆ ಬಳಲಿದೆ
ತಿರುಗುವ ಗಾಳಿಪಂಕದ ಕೆಳಗೆ ||
ಬಾಯಾರಿದ ಭೂಮಿಗೆ ವರ್ಷದ ಸ್ಪರ್ಷವಿಲ್ಲದೆ
ಅಡಗಿದೆ ಮುಗಿಲು ಕಡಲಿನ ತಳದಲಿ
ದಗೆಯಲಿ ಬೇಯುತ ತಂಪನು ಬಯಸುತ
ಏಂದೋ ಮಳೆಯನು ಸ್ವಾಗತಿಸುವುದು ಬೀಳ್ಕೊಡುತ ಬೇಸಿಗೆಯುನು ||
No comments:
Post a Comment