Tuesday, April 24, 2012

|| ಕಪ್ಪು ಹಲಗೆ ||


ಬರೆದರೆ ಬಿಳುಪಾಗಿ ಕಾಣುವುದು
ಬೇಡವೆಂದರೆ ಅಳಿಸಲೂಬಹುದು
ಹಳೆದನು ಅಳಿಸುತ
ಬೇರೆಯದನು ಬರೆಯುತ
ಹೊಸದನು ತಿಳಿಯಬಹುದು ಅತ್ತಿತ್ತ ಅರಸದೆ ||

ಸ್ಪಷ್ಟವಾಗಿ ನೋಡಿದ್ದೆಲ್ಲ ಇಷ್ಟವಾಗಿ
ವರಿಸಲು ಮನದಲಿ ಇಛ್ಛೆಯಾಗಿ
ನನ್ನದು ಎಂಬ ಭಾವನೆ ಗಾಢವಾಗಿ
ಖುಷಿಯಲಿ ಎದೆಯುಬ್ಬಿಸಿ ನಡೆವರು ವಿರಹಿಯಾಗಿ  ||

ದಿನವನು ಕಾಣುತ ಖುಷಿಯಲಿ
ಹೃದಯ ಹಾಡಿತು ಎದೆಯಲಿ
ಒಂದರ ಹಿಂದೆ ಒಂದನ್ನ ನೋಡಲು ಒಲವಾಗಿ
ಹೃದಯವಾಗುವುದು ಕಪ್ಪುಹಲಗೆಯ ಪ್ರತಿಬಿಂಬ ||

No comments:

Post a Comment