Friday, August 2, 2013

|| ಜೊತೆಯಾಗಿ ||

ಈ ಪ್ರೀತಿ ಮಳೆಯಲ್ಲಿ
ನೆಮ್ಮದಿಯ ಊರಲ್ಲಿ
ನಿನ್ನೊಲುಮೆ ಬೆರೆತಾಗ
ಮುಂಜಾವಿನಲು ಮಧುಚಂದ್ರ ||

ಕಾಳಜಿಯ ತೋರುತ ಗಂಡನಾಗುವೆ
ಬಾಳನು ಬೆಳಗುತ ಭಾಸ್ಕರನಾಗುವೆ
ಹಣೆಯಲ್ಲಿ ಕುಂಕುಮದ ಬೊಟ್ಟಾಗುವೆ
ಕೊರಳಲ್ಲಿ ಕಾಣುವ ಕರಿಮಣಿಯು ನಾನಾಗುವೆ ||

ನಿನ ಬಾಳಲ್ಲಿ ಬರೆಯುವ
ಕವನದ ಕಾವ್ಯನಾಮ ನಾನು
ನಿನ ಉಸಿರಾಟದ ಏರಿಳಿತದಲ್ಲಿ
ನನ ಎದೆ ಭಡಿತವ ಕೇಳುವೆ ನಾನು ||

ಆಸೆಗಳ ನೆರವೇರಿಸೊ ಸಂಚಾಲಕ
ಖುಷಿಗಾಗಿ ಚಡಪಡಿಸೊ ನಿರ್ವಾಹಕ
ನಿನ ಔದಾರ್ಯ ಮನಸದು ನನಗಾಗಿ
ಅದರೊಡೆಯ ನಾನಾಗುವೆ ಜೊತೆಯಾಗಿ ||

6 comments:

  1. ಎಂತಹ ಒಳ್ಳೆಯ ಗಂಡನಾಗುವ ಲಕ್ಷಣಗಳಿವು ವಿನಾಯಕ. ಉಮ್ಮ ಉಮ್ಮ ನಿಮಗೆ... ;)

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

      Delete
  2. Nice ವಿನಾಯಕ್ ಅವರೇ...

    ನಿಜ ಬದರಿ ಸರ್ ತುಂಬಾ ಲಕ್ಷಣಗಳು ಕಾಣಿಸುತ್ತಿವೆ.

    ReplyDelete
  3. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

    ReplyDelete
  4. ತುಂಬಾ ಚೆನ್ನಾಗಿದೆ ಕವನ..........".ನಿನ ಉಸಿರಾಟದ ಏರಿಳಿತದಲ್ಲಿ ನನ್ನ ಎದೆ ಬಡಿತ ಕೇಳುವೆ ನಾನು" ಅದ್ಭುತವಾದ ಸಾಲು........

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ. ದೇವರ ಆಶೀರ್ವಾದ ಜನರ ಅನುಕಂಪ ಇರುವಲ್ಲಿಯವರೆಗೂ ಸದಾ ಹೀಗೆ ಬರೆಯುತ್ತಲೆ ಇರುತ್ತೇನೆ. ಸಮಯವಾದಾಗಲೆಲ್ಲ ಭೇಟಿಕೊಡುತ್ತಿರಿ ನನ್ನ ಬರಹಗಳನ್ನ ಬ್ಲಾಗಿನಲ್ಲಿ ಓದಿ ಹೀಗೆ ಪ್ರೋತ್ಸಾಹಿಸುತ್ತಿರಿ.

      Delete