ಜೀವವೊಂದು ಕುಣಿಯುತಿದೆ ಎಳುತ
ಪ್ರಾಣವೊಂದು ಮರುಗುತಿದೆ ಬೀಳುತ
ಏಳುಬೀಳಿನಾಟ ನಡೆಸುವನು ತನ್ನಿಚ್ಛೆಯಂತೆ
ನರ್ತಿಸುತ ನಟನೆ ನಡೆವುದು ಕಾಲಪುರುಷನ ಮನಿಸಿನಂತೆ ||
ಶ್ರೋತ್ರುವಾಗಿ ಕೇಳುತಿಹೆವು ವಾಣಿಯೊಂದನು
ಸಾವಿರ ನಿನ್ನೆಗಳುರುಳಿರುವುದನ್ನು ಅರಿತಿಹೆವು
ಕೋಟಿ ಕೋಟಿ ನಾಳೆಗಳು ಬರುವುದನ್ನು ಎದುರುನೋಡುತಿರುವೆವು
ನೀರಿಕ್ಷೆಯಲಿ ಸುಮ್ಮನೆ ವ್ಯಯಿಸಲು ಸಾಧ್ಯವೇ ಇಂದಿನ ಸಮಯವನು ||
ನಿರ್ದಿಷ್ಠಕಾರ್ಯಕೆ ಕಾಲ ಮೀಸಲಿಟ್ಟು
ಉಳಿದ ಘಳಿಗೆಯನ್ನೆಲ್ಲ ಅದರ ಗುಂಗಲೇ ಕಾಲಹರಣ ಮಾಡಿದರೆ
ಕಳೆದ ಸಮಯವೆಂದು ತಿರುಗಿ ಸಿಗದು ಜೀವನದಲಿ
ಇತರರನ್ನು ಗೌರವಿಸಿದಂತೆ ಕಾಲವನ್ನು ಗೌರವಿಸಿದರೆ
ಮಾಡಬಹುದು ಉನ್ನತ ಸಾಧನೆಯನ್ನು ಸಮಯಪ್ರಜ್ನೆಯಿಂದ ||
ಕಳೆದ ಸಮಯವು ಮತ್ತೆಂದೂ ಕೈಗೆ ಸಿಗದು ಪುನಃ
ಪರಿಸ್ಥಿತಿಯು ಬದಲಾಗದು ಕಾಲಚಕ್ರ ತಿರುಗದ ವಿನಃ
ಒಳ್ಳೆಯ ಸಮಯದಿ ನಡೆವುದು ಅದೃಷ್ಟದಾಟವು
ತಿರುಗಿದ ಕ್ಷಣದಲೇ ನಲಿವುದು ದುರಾದೃಷ್ಟವು
ಬದುಕಿನೇಳುಬೀಳಿಗೆ ಹೊಣೆಯಾಗುವುದು ಕಾಲ ||