ಮನದ ತಂತಿ ಮೀಟಿದೆ
ಮಧುರ ರಾಗ ಹಾಡಿದೆ
ಹೃದಯ ಗೀತೆ ಕೇಳಿದೆ
ಒಲವ ನಾಮ ಹೇಳಿದೆ
ಮನದಾಸೆ ಬಯಸಿದೆ
ಬದುಕಿನ ಜೊತೆ ಸೇರದೆ...
ದೂರದಾಚೆಯೆಲ್ಲೋ
ಭೂಮಿ ಭಾನು ಬೆರೆತ ಹಾಗೆ
ಕಣ್ಣೋಟಕೆ ಕಂಡಿದೆ
ನಾನು ನೀನು ಇಲ್ಲೇ
ಜೋಡಿಯಾಗಬಹುದು ಎಂದು
ಬಳಸಾದಂತೆ ಭಾಸವಾಗಿದೆ...
ಹಾರುವ ದುಂಬಿ ಕೂರದೆ
ನಿಂತ ಹೂವ ಮನೆಯ ಒಳಗೆ
ಮಕರಂದ ಹೀರುತ
ಒಲವಿನ ನಗೆ ಬೀರಲು
ಜಗದಲಿ ಏನೆಲ್ಲ ನಡೆಯುತಿರಲು
ನಮ್ಮ ಮದುವೆ ದೃಢವೆನುಸುತ್ತಿದೆ...
ಹಾಡಿಕೊಳ್ಳಬಲ್ಳ ರಚನೆ.
ReplyDeleteಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
DeleteHey Super..:)
ReplyDeleteಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
Delete