ಈ ಒಲವ ಅರಮನೆಯ
ರಾಜ ನಾನು
ಆ ಸ್ವಾರ್ಥ ಗುಡಿಸಲಿನ
ವೈರಿ ಎಂದು
ಧಾರೆ ಎರೆವ ಪ್ರೀತಿಯಲಿ
ಗಡಸು ಇರದು
ಮುದ್ದಾಡೊ ಮನಸಿನಲಿ
ಕಲ್ಲು ಸಿಗದು
ನನ್ನ ಕರ್ಕಶ ದನಿಯಲ್ಲು
ಕೊಂಕು ಕಾಣದು
ಆಲಿಂಗನದ ಆಶಯವು
ತಪ್ಪಾಗದು
ಜೊತೆನಡೆವ ಬಾಳಿನಲಿ
ಭಾಜಕದ ಹಂಗಿಲ್ಲ
ಬೆರೆತಿರುವ ವೇಳೆಯಲಿ
ಮಾದಕದ ಗುಂಗಿಲ್ಲ
ಸನಿಹಕೆ ಸಿಗದಂತೆ
ಕನಸಿನಲ್ಲಿ
ಅನುಬಂಧ ಅಗಲದಂತೆ
ನನಸಿನಲ್ಲಿ
ನಿನಗೆಂದೆ ಕಾಳಜಿಯು
ಅಳಿವಿರದಂತೆ
ನೀಡುವೆ ಸಂತೋಷವನು
ಸಾವಿಲ್ಲದಂತೆ
ನನ್ನ ಜೀವ ಸವೆಸುವೆನು
ಸಾಗರದ ಅಲೆಯಂತೆ
ಮೊಗದಲ್ಲಿ ಕಾಂತಿಯುಳಿಸುವೆನು
ಆ ಪೂರ್ಣ ಶಶಿಯಂತೆ
ಪ್ರೀತಿ ಇದ್ದೆಡೆ ಸಾವಿರ ನೋವುಗಳೂ ಸವಿ ಪನ್ನೀರಂತೆ. ಇಂತಹ ಒಲವು ನಲ್ಲೆಗೂ ಮುಟ್ಟಲಿ.
ReplyDeleteಖಂಡಿತವಾಗಿಯು ಅವಳಿಗೆ ಮುಟ್ಟುತ್ತದೆ. ಧನ್ಯವಾದಗಳು.
Deletechandada bhava. olavina kavite.
ReplyDeleteಧನ್ಯವಾದಗಳು.
ReplyDelete