Monday, December 9, 2013

|| ಮಣೆಯ ಹಾಕದಿರು ||

ಮರೆತೆ ನಿನ್ನ ರೂಪವನ್ನು
ಅರಿತೆ ಮನದ ಭಾವವನ್ನು
ಬಾಹ್ಯ ಅಂದ ಚಂದಕ್ಕೆಂದು
ಸೋಲದಂತ ಮನಸುಯೆಂದು...

ತೋರೆದು ನೀನು ಬದುಕಬೇಕು
ಅಂದ ವೃದ್ಧಿಸೊ ಸಾಧನಗಳನು
ನಾವು ನಮ್ಮವರೆಂಬ ಹೆಮ್ಮೆಯ
ಗರ್ವ ಮಾತ್ರವೆ ಹಿತ ವಿನಿಮಯ...

ತೊಳೆದು ಹೋಗುವುದು ಮುಖದ ಬಣ್ಣ
ಅಳಿವುದುಂಟೆ ಹೃದಯದ ರೂಪ
ಕೆಡುಕು ಬುದ್ಧಿಯ ಕರಗಿಸಬಹುದು
ಲಾವಣ್ಯವೆಂಬ ಜ್ಞಾತೃವ ಇಳಿಸಲಾಗದು...

ಸುಕ್ಕಾಗುವುದು ಸೌಂದರ್ಯ
ಮುಪ್ಪಕಾಣದು ಮೃದುಸ್ವಭಾವವು
ವಿಕೋಪದಲಿ ಸುಂದರತೆಯ ಮರಣ
ಮರುಜನ್ಮಿಯಾದರೂ ಬದಲಾಗದು ಮುಗ್ಧತೆಯು...

ಅಹಂಕಾರಕ್ಕೆಂದು ಒಂಟಿತನವೆ ಬಳುವಳಿ
ವಿನಯತೆಯಿರಲು ಒಡನಾಟವೆ ಜೊತೆಯಲಿ
ಸೊಬಗಿಗೆಂದು ಮಣೆಯ ಹಾಕದೆ
ಶಾಂತಸ್ವಭಾವವನು ಗೌರವಿಸುವ...

4 comments:

  1. ಯಾವ ವಿಚಾರಕ್ಕೆ ನಿಜವಾಗಲೂ ಮಣೆ ಹಾಕಬೇಕು ಮತ್ತು ಯಾವುದಕ್ಕೆ ಬೇಡ ಎನ್ನುವುದು ಇಲ್ಲಿ ತುಂಬಾ ಮಾರ್ಮಿಕವಾಗಿ ಚಿತ್ರಿತವಾಗಿದೆ.

    ReplyDelete
    Replies
    1. ಧನ್ಯವಾದಗಳು ಬದರಿ ಸಾರ್.

      Delete