ಆ ಹರಿವ ನೀರಿನಲಿ
ಕಲ್ಲನ್ನು ಎಸೆದು
ಕಪ್ಪೆಯನು ಹಾರಿಸುವ
ಕೈಚಳಕವು...
ಆ ಚಂದ್ರ ತೇಲುತಲಿ
ಮೂಡುವ ಬಳೆಯೊಳಗೆ
ಒಳನುಸುಳುತ ಹೊರಬರುತ
ಅಲ್ಲಾಡಿಸುವ
ಜಲಕ್ರೀಡೆಯಾಡುತಿಹನು ...
ಕೆರೆಯಲ್ಲಿ ಜರಿಯಲ್ಲಿ
ಹರಿವ ಹೊಳೆಯಲ್ಲಿ
ಆ ನೀರ ಸದ್ದಿನಲು
ಕೇಳುತಿವೆ
ಅಕ್ಕರೆಯ ಮಾತುಗಳು...
ಹನಿ ಹನಿಯಲ್ಲು
ನೆನೆದಿರುವ ಭಾವ
ಮುಸುಕಿರುವ ಮಂಜಿನಲಿ
ಪ್ರೀತಿಯ ಮಳೆಯನು
ಧಾರೆಯೆರೆಯುವೆ ತೀರದಲಿ...
ಈ ಮನಸಿನ ಗೂಡಿನಲಿ
ನಿನ್ನನ್ನು ಕೂರಿಸಿ
ಒಲವಿನಾರೈಕೆ ಮಾಡುತ
ಸಮರ್ಪಿತನಾಗುವೆನು...
chanda kavite .
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
Deleteಶೀರ್ಷಿಕೆಗೆ full marks.
ReplyDeleteಸಮರ್ಪಿತನಾಗುವ ಸರಳೋಪಾಯ ಉಪದೇಶಿಸಿದ ವಿನಾಯಕರಿಗೆ ಉಘೇ ಉಘೇ...
ಸಮರ್ಪಣೆಯಿಂದಲೆ ಚಂದದ ಬದುಕು ಸಾಧ್ಯವಲ್ಲವೆ ಬದರಿ ಸಾರ್.
Deleteಶೀರ್ಷಿಕೆಗೆ full marks.
ReplyDeleteಸಮರ್ಪಿತನಾಗುವ ಸರಳೋಪಾಯ ಉಪದೇಶಿಸಿದ ವಿನಾಯಕರಿಗೆ ಉಘೇ ಉಘೇ...
Chanda Vinayak. . ishtavaaytu.. :)
ReplyDeleteಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
Delete