ಊಟದ ಬಾಳೆಯ
ಬದಿಯಲ್ಲಿ ಇದ್ದಂಗೆ
ಉಪ್ಪಿನಕಾಯಿ
ನೀ ಸ್ವಲ್ಪ ತಡೆದು
ತಾಳ್ಮೆಯಿಂದ ಕಾಯಿ
ಅರಿಯುವೆ ಈ ಜಗದ
ವಿಸ್ಮಯ...
ನೋಡು ಗೆಳತಿ
ನವಿಲ ನಾಟ್ಯವ
ಎಂಥಾ ಸೊಬಗಿದು
ಚಿಗುರು ಎಲೆಯ
ಚಿತ್ತಾರ ಮೇಯುತ
ಜಿಗಿವ ಜಿಂಕೆಯ ಕಾಣಲು...
ಮನದೊಡತಿ ಆಲಿಸೆಯಾ
ಮೊಗ್ಗೊಂದು ಹೂವಾಗೊ
ನಾದಮಯ ಸಮಯವ
ನಿನೀಗ ಗುರುತಿಸುವೆಯಾ
ಆ ಮೀನು ಈಜಿದ
ಚಂದದ ಚೆಲುವಿನ ದಾರಿಯಾ...
ನಿಸರ್ಗದ ಸೊಬಗನ್ನು ತೋರಿಸುವಾಗ ನಲ್ಲೆ ಕಾಯದೆ ಇರುತ್ತಾಳೆಯೆ. ಸುಂದರವಾಗಿದೆ.
ReplyDeleteಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
Deleteಭಾಷೆಯ ಮೇಲೆ ಉತ್ತಮ ಹಿಡಿತ, ಒಳ್ಳೆಯ ಪದ ಪ್ರಯೊಗ. ಉತ್ತಮವಾದ ಬರಹಗಳು
ReplyDeleteಧನ್ಯವಾದಗಳು ನಿಮ್ಮ ಮೆಚ್ಚುಗೆಗೆ.
Delete