Monday, December 16, 2013

|| ಭಾವ ಪಲ್ಲವಿ ||

ಮನದ ಭಾವ ಪಲ್ಲವಿಗೆ
ಬದುಕ ವೀಣೆ ನಾದವು
ಏರಿಳಿತದ ದಿನಗಳಿಗೆ
ಹೆಜ್ಜೆಹಾಕೊ ಸಮಯಗಳು...

ಕಾಲ ಕವಿತೆ ಬರೆದಿರಲು
ಎದೆಯ ತಂತಿ ರಾಗವು
ನೆನೆದಿರುವುದು ಅಗದೆ
ತೊಳಲಾಟದ ಜೀವನವು...

ಕೊರಳ ಸೆರೆ ನಡುಗಿರಲು
ತೊದಲ ಮಾತು ಕೇಳಿತು
ಭಯವೇತಕೆ ಹೃದಯದಿ
ಎದುರಿಸಲು ಸಂದರ್ಭವನು...

ತಪ್ಪು ಮನಸಿನ ವ್ಯಾಧಿಗೆ
ಪ್ರಾಯಶ್ಚಿತವೆಂಬ ಔಷಧ
ವಿಷವಾಗೊ ಚುಚ್ಚುಮಾತಿಗೆ
ಅಮೃತವಾಗದು ಆಲಿಂಗನ...

5 comments: