Saturday, July 20, 2013

|| ಜೊತೆಯಿರುವ ಬಯಕೆ ||

ಕಲ್ಪನೆಯಲಿ ನಿನ ರೂಪ ಎಷ್ಟು ಚಂದ
ಅರಿತಿಹೆನು ನಿನ ಮನವ ಮಾತಿನಿಂದ
ಸೆಳೆಯುವ ಸೊಗಸಿದೆ ಆ ಚಿಕ್ಕ ದೇಹದಲಿ
ವಿನೀತ ಭಾವನೆಯು ಆ ಚೊಕ್ಕ ಮನಸಿನಲಿ ||

ನನ್ನ ನಿನ್ನ ನೀತಿ ತತ್ವಗಳು ಒಂದೆ
ಗಮ್ಯಸ್ಥಾನ ತಲುಪುವ ದಾರಿಯೊಂದೆ
ನನಗಾಗಿ ಮಿಡಿಯುತಿಹ ಜೀವ ನಿಂದೆ
ಸೋಲಿನಲು ಸೋತಿಹೆನು ಪ್ರೀತಿಗೆಂದೆ ||

ನೋಡದೆ ನಲಿಯುವ ಜೀವದ ಭಾವವಿಂದು
ಪರಸ್ಪರ ಕಾಳಜಿಯ ತೆಗೆದುಕೊಂಡಿರುವುದು
ನಿನ್ನ ಕಷ್ಟ ಸುಖಗಳಲಿ ಪಾಲುದಾರನೆಂದು
ಪ್ರತಿಕ್ಷಣವು ಜೊತೆಯಿರುವ ಬಯಕೆ ನಮದು ||

No comments:

Post a Comment