Tuesday, July 16, 2013

|| ಸ್ಮಿತೆಯ ಮೊಗದಲಿ ||

ಅರಿತೆ ನಿನ್ನೆಯ ಮನದ ಭಾವನೆ
ದೃಡತೆ ಇರುವ ನನ್ನ ಯೊಚನೆ
ಆದೆ ನೀನು ನನ್ನ ಸ್ನೆಹಿತೆ
ಕೇಳಿ ಸೋತೆ ನಿನ್ನ ಮನಸಿಗೆ
ಧಾರೆ ಎರೆವೆಯಾ ನಿನ್ನ ಪ್ರೀತಿಯ
ಶರಣು ಎನ್ನುವ ನನ್ನ ಬದುಕಿಗೆ ||

ಕಾಣದೆ ಪ್ರೀತಿಸಿಹೆ ನಿನ್ನ ಜೀವವ
ಮಾರುಹೋಗಿಹೆ ಅರಿತು ಮುಗ್ಧ ಗುಣವ
ಕದ್ದು ನೋಡಿಹೆ ನಿನ್ನ ಭಾವಚಿತ್ರವ
ಹೇಗೆ ವರ್ಣಿಸಲಿ ಸೆಳೆವ ಚಂದವ
ತಾರೆ ಮಿನುಗುವುದು ನಿನ್ನ ಕಣ್ಣಲಿ
ಹೂವ ಅಂದವು ಸ್ಮಿತೆಯ ಮೊಗದಲಿ ||

2 comments:

  1. ದಶಕಗಳ ಹಿಂದಿನ ನೆನಪು ಮತ್ತು ಅವಳ ಭಾವ ಚಿತ್ರ ನೆನಪಾದವು.

    ReplyDelete