ಮನದಲಿ ಮೂಡಿದ ಅನುಮಾನ ಹೇಳಿತು
ನಾ ಬಂದಿರುವೆ ನಿನ್ನ ಮನ ಕೆಡಿಸಲು
ವಿಶ್ವಾಸವ ಕಳೆದುಕೊಂಡಿರುವೆ ಯೋಚಿಸದೆ
ನಂಬಿಕೆಯ ಮಾತು ನದುವಿನಲಿ ನೀರಾಗಿದೆ
ಪೂರ್ವಾಪರ ತಿಳಿಯದೆ ದುಡುಕಿರುವೆ
ಸದ್ದಿಲ್ಲದೆ ಸಹನೆಯಡಗಿದೆ ನನ ಹಿಂದೆ
ನೀ ಏನ ಮಾಡಲು ಸಾಧ್ಯ ನನ ಮುಂದೆ
ಎಲ್ಲರಿಗಿಂತಲು ನಾನು ಮೇಲಿರುವಾಗ ||
ಹೀರಿಹೆನು ನಿನ್ನ ಯೊಚನಾ ಶಕ್ತಿಯ
ಮರೆಸಿಹೆನು ನಿನ್ನಲ್ಲಿ ನಂಬಿಕೆಯ ಶಬ್ಧವ
ಬೆನ್ನೇರಿ ತಲೆ ಮೇಲೆ ಕುಳಿತಿಹೆನು
ಸಲಹೆ ಕೇಳದಂತೆ ಕಿವಿಯಲ್ಲಿ ಬೆರಳಿಟ್ಟಿಹೆನು
ವಿಚಾರ ಮಾಡುವ ಶಕ್ತಿಯನೆ ಕುಂದಿಸಿಹೆನು
ನೀನೇನೆ ಮಾಡಿದರು ನನ ಮೀರಿಸಲಾಗದು
ನೆಮ್ಮದಿಯ ಬಾಳಿಗೆ ತೊರೆಯ ಬೇಕು ನನ್ನನು
ಇಲ್ಲ ಶಂಕಿಸದೆ ಶರಣಾಗ ಬೇಕು ಸಂಶಯಕೆ ||
ನಾ ಬಂದಿರುವೆ ನಿನ್ನ ಮನ ಕೆಡಿಸಲು
ವಿಶ್ವಾಸವ ಕಳೆದುಕೊಂಡಿರುವೆ ಯೋಚಿಸದೆ
ನಂಬಿಕೆಯ ಮಾತು ನದುವಿನಲಿ ನೀರಾಗಿದೆ
ಪೂರ್ವಾಪರ ತಿಳಿಯದೆ ದುಡುಕಿರುವೆ
ಸದ್ದಿಲ್ಲದೆ ಸಹನೆಯಡಗಿದೆ ನನ ಹಿಂದೆ
ನೀ ಏನ ಮಾಡಲು ಸಾಧ್ಯ ನನ ಮುಂದೆ
ಎಲ್ಲರಿಗಿಂತಲು ನಾನು ಮೇಲಿರುವಾಗ ||
ಹೀರಿಹೆನು ನಿನ್ನ ಯೊಚನಾ ಶಕ್ತಿಯ
ಮರೆಸಿಹೆನು ನಿನ್ನಲ್ಲಿ ನಂಬಿಕೆಯ ಶಬ್ಧವ
ಬೆನ್ನೇರಿ ತಲೆ ಮೇಲೆ ಕುಳಿತಿಹೆನು
ಸಲಹೆ ಕೇಳದಂತೆ ಕಿವಿಯಲ್ಲಿ ಬೆರಳಿಟ್ಟಿಹೆನು
ವಿಚಾರ ಮಾಡುವ ಶಕ್ತಿಯನೆ ಕುಂದಿಸಿಹೆನು
ನೀನೇನೆ ಮಾಡಿದರು ನನ ಮೀರಿಸಲಾಗದು
ನೆಮ್ಮದಿಯ ಬಾಳಿಗೆ ತೊರೆಯ ಬೇಕು ನನ್ನನು
ಇಲ್ಲ ಶಂಕಿಸದೆ ಶರಣಾಗ ಬೇಕು ಸಂಶಯಕೆ ||
No comments:
Post a Comment