ದನವಿರದ ಕೊಟ್ಟಿಗೆಯಲಿ
ಸೊಪ್ಪು ಹಾಸಿದರೇನು
ಸಗಣಿಯಿಲ್ಲದೆ ಗೊಬ್ಬರವಾಗದು
ನೊಪ್ಪು ಒಣಗಿದ ದೆರಕಾಗುವುದು ||
ಬರಡಾದ ಭಾವಿಯಲಿ
ಕೊಡವ ಇಳಿಸಿದರೇನು
ಕುಡಿಯಲು ನೀರು ದೊರೆಯದು
ಗಂಟಲಿನ ದಾಹ ಇಂಗದು ||
ಗಂಧಗೊತ್ತಿರದ ಕತ್ತೆಯೆದುರು
ಕಿನ್ನರಿಯ ಬಾರಿಸಿದರೇನು
ತಿಳಿಯದು ಬುದ್ಧಿವಾದಗಳು
ಸಮಯದ ವ್ಯರ್ಥ ಶ್ರಮಗಳು ||
ಭಾವನೆಗೆ ಬೆಲೆಯಿರದ ಕ್ಷಣಗಳು
ಮೋಹದಲಿ ಮುಳುಗಿದ ಮೌನಗಳು
ಸಂಸ್ಕಾರ ಸಿಗದಿರುವ ಸಲಹೆಗಳು
ಮೂರ್ಖರ ಜೊತೆಗಿನ ಮಾತುಗಳು ||
ಸಮಯದ ವ್ಯರ್ಥ ಶ್ರಮಗಳನ್ನು ಸಾದೃಶ್ಯವಾಗಿ ವಿವರಿಸಿದ್ದೀರಾ. ಅತ್ಯಂತ ಮಾರ್ಮಿಕ ಕವನ.
ReplyDelete