Monday, July 22, 2013

|| ಬಣ್ಣದ ಹೆಜ್ಜೆ ||

ಅಂಬೆಗಾಲಿಡುತಲಿ ನಡೆದಾಗ
ಮೂಡಿದ ಕಾಮನಬಿಲ್ಲ ಕಿತ್ತು
ಬೇರ್ಪಡಿಸಿ ಅಂಟಿಸಿದ ಖುಷಿ
ಪದಗಳಿಗೆ ಸಿಗದ ನವೋಲ್ಲಾಸ ||

ಆಡುತ ಹೊಡೆದಾಡುತ ಕುಣಿದಾಗ
ಹಸಿರು ಕೆಂಪು ಬಣ್ಣಗಳ ನೋಟವು
ಸ್ವಲ್ಪ ಸಿಹಿ ಸ್ವಲ್ಪ ಹುಳಿಯ ನೆನಪು
ಮಾಸದ ಚಿತ್ತಾರದ ಪಯಣವು ||

ಕಲಿಕೆಯು ತೋರಣದ ಹಬ್ಬವು
ಉತ್ತೀರ್ಣತೆ ರಂಗಿನ ಸೊಗಸು
ಅನುತ್ತೀರ್ಣತೆಗೆ ಕರಿಯ ಮುನಿಸು
ಇದು ಕಪ್ಪು ಬಿಳುಪಿನ ಮಿನುಗು ||

ಸ್ನೇಹಿತರೊಂದಿಗೆ ಸವಿಯುವ ಸಮಯ
ಬಿಡಿಸಲಾಗದ ಗುಲ್ಲೆಬ್ಬಿಸುವ ಚಿತ್ರಗಳು
ಮನಸನರಿತ ಮಡದಿಯ ಸಂಗ
ಅಚ್ಚಳಿಯದ ಬಣ್ಣದ ಬದುಕು ||

ಬಾಳಿನೇಳಿಗೆಯು ಬಣ್ಣದ ಕಾಮನಬಿಲ್ಲು
ಬದುಕಿನ ತೊಳಲಾಟ ಶಿಲೆಯ ಕಲ್ಲು
ಏರಿಳಿತದಲಿ ಅನುಭವಿಸ ಬೇಕು ಲಜ್ಜೆ
ತಿರುಗಿ ನೋಡಲು ಬದುಕೊಂದು ಬಣ್ಣದ ಹೆಜ್ಜೆ ||

4 comments:

  1. ಬಣ್ಣದ ಭಾವಗಳು ಚೆನ್ನಾಗಿವೆ ..

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  2. ಬಣ್ಣದ ಹೆಜ್ಜೆ ಮತ್ತು ಬಣ್ಣದ ಗೆಜ್ಜೆ ಎರಡೂ ಬದುಕಿನ ವರ್ಣಮಯ ಹರಿವಿಗೆ ಸೂಚಕಗಳು. ಕವಿತೆಯ ಆಳದಲ್ಲಿ ಅಡಗಿಸಿಟ್ಟಿರುವ ಆ ವಿವೇಚನಾ ಮಂತ್ರವು ನನ್ನು ಸೆಳೆಯಿತು.

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ ಮತ್ತು ಪ್ರೋತ್ಸಾಹಕ್ಕೆ.

      Delete