ಸರ್ವ ಸಮಯದಲ್ಲು ಆಗುವಂತಹ ಘಟನೆ, ಸಾಮಾಜಿಕ ಬದಲಾವಣೆ, ಕೈ ಮೀರಿದ ವರ್ತನೆ, ಬಯಸದ ಬದಲಾವಣೆ ಇವೆಲ್ಲವುಗಳೆಲ್ಲವು ಸಂಭವಿಸಿದಾಗ ಎಲ್ಲರು ನುಡಿಯುವ ಮಾತು ಒಂದೆ ಅಗಿರುತ್ತದೆ ಮತ್ತು ವರ್ತಮಾನದ ವೈಪರಿತ್ಯದಲ್ಲಿ, ಭೂತದ ಬದಲಾವಣೆಯಲ್ಲಿ, ಭವಿಷ್ಯದ ನಿರೀಕ್ಷೆಗಳಲ್ಲಿ ಏರು ಪೇರು ಉಂಟಾದಾಗ ಅದರ ನೇರ ಹೊಣೆಗಾರಿಕೆ ಹೊರುವುದು ಕಾಲವಾಗಿರುತ್ತದೆ. ಇಂತಹ ದೂಷಣೆಗೆ ಅರ್ಥವಿಲ್ಲದಿದ್ದರೂ ವರ್ತಮಾನದ ಪೀಳಿಗೆಯವರು ಮಾಡುವಂತಹ ಕೆಲಸಕ್ಕೆ ಕಾಣದ ಕಾಲವು ದೋಷಿಯಾಗುತ್ತದೆ. ಇವೆಲ್ಲ ಹೇಗೆ ಎನ್ನುವುದಕ್ಕೆ ವಿವರಣೆಯಲ್ಲಿ ತಿಳಿಸುತ್ತಾ ಸೂಕ್ತ ಉದಾಹರಣೆ ನೀಡುತ್ತೇನೆ.
ನಮ್ಮ ಮನೆಗಳಲ್ಲಿ ಚಿಕ್ಕ ಮಕ್ಕಳು ಪ್ರತಿಭಾನ್ವಿತ ಪ್ರದರ್ಶನ ತೋರಿದಾಗ ನಾವು ಖುಷಿಯಲಿ ರಮಿಸುತ್ತೇವೆ. ಅವರ ಗುಣಗಾನ ಮಾಡುತ್ತ ಮಾತನಾಡುವಾಗ ಹೇಳುವುದು ಸಹಜವಾಗಿ ಈಗಿನ ಕಾಲದ ಮಕ್ಕಳೆ ಹೀಗೆ ತುಂಬ ಮೇಧಾವಿಗಳು, ಚಿಕ್ಕವಯಸ್ಸಿನಿಂದಲೆ ಜಾಣರಾಗಿರುತ್ತಾರೆ ಎಂದು ಉತ್ಪೇಕ್ಷೆಯ ಮಾತನ್ನಾಡುತ್ತೇವೆ.
ಪ್ರೀತಿಸಿ ಮದುವೆಯಾದಾಗ, ಪ್ರೀತಿಸಿದವರ ಹಿಂದೆ ಹೋದಾಗ, ಮನೆಯಲ್ಲಿ ಇಷ್ಟಪಟ್ಟವನನೆ ಬಾಳಸಂಗಾತಿಯಾಗಿ ಬೇಕು ಎಂದು ಹಠಮಾಡಿದಾಗ ಪರರು ಹೇಳುವುದು ಈ ಕಾಲದ ಜನಗಳೇ ಹೀಗೆ ಬಯಸಿದ್ದನ್ನ ಪಡೆಯದೆ ಸುಮ್ಮನಿರುವುದಿಲ್ಲ. ಎಲ್ಲ ಕಾಲದ ಮಹಿಮೆ ಎಂದು ಹಿಯಾಳಿಸುತ್ತಾರೆ.
ಬೇರೆ ಸಂಸ್ಕೃತಿಯ ಅನುಸರಿಸುತ, ಎಲ್ಲರಿಗಿಂತ ವಿಭಿನ್ನವಾಗಿ ಕಾಣುತ, ದುಷ್ಟ ಚಟಗಳ ದಾಸರಾಗಿ ವ್ಯಸನಿಗಲಾದವರನ್ನು ನೋಡಿ ಅಂಥವರಿಗೆ ತಿಳುವಳಿಕೆ ಹೇಳುವದ ಬಿಟ್ಟು ಕಾಲ ಸರಿ ಇಲ್ಲವೆಂದು ಹೇಳುತ್ತ ಕಾಣದ ಕಾಲದ ಮೇಲೆ ಆರೋಪ ಮಾಡುವುದೆಷ್ಟು ಸರಿ...?
ಬೇರೆಯವರ ಮಾತು ಕೇಳಿ, ಸಂಗಾತಿ ಸಂಪ್ರೀತಿ ಸುಳಿಯಲ್ಲಿ ಸಿಲುಕಿ, ಬೇರಾವುದೊ ಆಮಿಶದ ವಶವಾಗಿ ಹೆತ್ತವರನ್ನ ಹೀನಾಯವಾಗಿ ಕಂಡು, ಉಳಿದವರನ್ನ ನಿರ್ಲಕ್ಷಿಸಿ ಬಾವಿಯೊಳಗಿನ ಕಪ್ಪೆಯಂತಾದಾಗ ಜನ ಹೇಳುವುದು ಕಾಲ ಕೆಟ್ಟೊಗಿದೆ ಎಂದು ತಮ್ಮ ಅಸಹಾಯಕತೆಯನ್ನ ಹೊರಹಾಕುತ್ತಾರೆ.
ಸಮಯ ಸಂದರ್ಭಕ್ಕೆ ತಕ್ಕಂತೆ ಪರಿಸ್ಥಿತಿಯ ಗುಲಾಮರಾಗುವ ಜನರ ವರ್ತನೆಗೆ ಕಾಣದ ಕಾಲವನ್ನೇಕೆ ಹೊಣೆಗಾರರನ್ನಾಗಿ ಮಾಡಬೇಕು...?
ವರ್ತಮಾನದ ಪೀಳಿಗೆಯವರು ಮಾಡುವ ಮನದಿಶ್ಚೆಯ ಕಾರ್ಯಕೆ, ಬದಲಾವಣೆಗೆ ಕಾಲವನ್ನು ದೂಷಿಸುವುದು ಸರಿಯಾದ ಕ್ರಮವೇ...?
ಅದು ಈಗಿನ ಕಾಲದಲ್ಲಾಗಲಿ ಅಥವ ಹಿಂದಿನ ಕಾಲದಲ್ಲಾಗಲಿ,
ವರ್ತಮಾನದ
ಜನ ಸಾಮಾನ್ಯರು ಮಾಡುವಂತಹ ಕೆಲಸ ಧನಾತ್ಮಕವಾಗಿರಲಿ ಅಥವಾ ಋಣಾತ್ಮಕವಾಗಿರ್ಲಿ ಅದರ ನೇರೆ ಹೊಣೆಗಾರಿಕೆಯನ್ನು ಕಾಲದ ಮೇಲೆ ಹೊರಿಸುವುದು ಎಲ್ಲೆಡೆ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಸಮಾಜದಲ್ಲಿ ಏನೇ ಆದರೂ ಅದಕ್ಕೆ
ದೂಷಿಸುವುದು ಮಾತ್ರ ಕಾಲವನ್ನ,
ಜನರು ಮಾಡುವ ಕರ್ಮಕೆ ಕಾಲವನ್ನು ದೂಷಿಸದೆ ಧನಾತ್ಮಕ ಚಿಂತನೆಗೆ ಅಣಿಯಾಗುವುದು ಸೂಕ್ತ. ಹೀಗಾಗಿ ಹೇಳುವುದು
"ಪೀಳಿಗೆಯ ಹೊಸ ತಾಳ ಹೊಣೆ ಹೊರುವುದು ಕಾಲ".
ಪೀಳಿಗೆಯ ಪೀಕಲಾಟವೇ ಹೀಗೆ ಗೆಳೆಯ.
ReplyDeleteಒಂದು ಮಾತು ನನಗೆ ನಾಟಿತು 'ಸಮಾಜದಲ್ಲಿ ಏನೇ ಆದರೂ ಅದಕ್ಕೆ ದೂಷಿಸುವುದು ಮಾತ್ರ ಕಾಲವನ್ನ'. ಇದು ಸರ್ವತ್ರ ಸತ್ಯ.
ಧನ್ಯವಾದಗಳು ಬದರಿ ಸಾರ್
Delete