Thursday, July 25, 2013

|| ಖಾಸಗಿ ಬದುಕಲಿ ||

ಬಣವಿಲ್ಲದ ಒಂಟಿಸಲಗ
ಬಿಸಲ ಉರಿಯಲಿ ಬಳಲಿ
ಹನಿ ನೀರಿಗೆ ಹುಡುಕಾಟ
ಯಾವ ನೆತ್ತರು ದಾಹಕೆ
ತಿರುಳಿಲ್ಲದ ಹೊತ್ತಿನಲಿ ||

ಕಲ್ಮಶದ ಹವೆಯನು ದೂರಾಗಿಸಿ
ದೂಳಿನ ಅಂಗಳವ ಗೂಡಾಗಿಸಿ
ಗಣಿ ಧಣಿಗಳ ದರ್ಬಾರಿನೂರಲಿ
ಗರ್ವ ಮರೆತು ಸಂಗದಲುಳಿದು
ಅರೆದಿನದ ಕರ್ತವ್ಯದಲಿ ತಂತ್ರಜ್ಞ
ಸ್ವಂತಜೀವನವೆಲ್ಲಿ ಖಾಸಗಿ ಬದುಕಲಿ ||

6 comments:

  1. ಬಿಸಿಲು ನಾಡಿನ ಬದುಕು ಯಾರದೋ ಹಂಗಿನ ಜೀವನ.
    ಗೆಳೆಯ ಖಾಸಗೀ ಬದುಕನ್ನು ನೀವು ವಿಶ್ಲೇಷಿಸಿದ ಪರಿ ನೆಚ್ಚಿಗೆಯಾಯಿತು.

    ReplyDelete
    Replies
    1. ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ. ದೇವರ ಆಶೀರ್ವಾದ ಜನರ ಅನುಕಂಪ ಇರುವಲ್ಲಿಯವರೆಗೂ ನಾ ಬರೆಯುತ್ತಲೆ ಇರುವೆ.

      Delete
  2. ಸ್ವಂತ ಜೀವನವೆಲ್ಲಿ ಖಾಸಗಿ ಬದುಕಲ್ಲಿ....ಯಾಕೋ ತುಂಬಾ ಹತ್ತಿರ ಅನಿಸ್ತು..
    ಈ ಸಾಲುಗಳು ಬರಿಯ ಸಾಲುಗಳಾಗಿ ಉಳಿದಿಲ್ಲ ..ಮನದಲ್ಲಿ ಅಚ್ಚಾಗಿ ಬಿಡ್ತು.

    ಮೊದಲ ಸಲ ನಿಮ್ಮ ಬ್ಲಾಗ್ ಗೆ ಬಂದೆ ..ಖುಷಿ ಕೊಡ್ತು ಸಾಲುಗಳು .
    ಬರೀತಾ ಇರಿ

    ReplyDelete
    Replies
    1. ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ. ದೇವರ ಆಶೀರ್ವಾದ ಜನರ ಅನುಕಂಪ ಇರುವಲ್ಲಿಯವರೆಗೂ ನಾ ಬರೆಯುತ್ತಲೆ ಇರುವೆ. ಸಮಯವಾದಾಗಲೆಲ್ಲ ಭೇಟಿಕೊಡುತ್ತಿರಿ ನನ್ನ ಬರಹವನ್ನ ಬ್ಲಾಗಿನಲ್ಲಿ ಒದಿ ಹೀಗೆ ಪ್ರೋತ್ಸಹಿಸುತ್ತಿರಿ.

      Delete
  3. baduku barahavada pari chandavagide. vaastavakke hattiravennisuva kavite. ishtavayitu.

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

      Delete