Sunday, October 24, 2021

ಸಜ್ಜನರ ಜೊತೆ

 ಕಡುಗತ್ತಲ ನಡುರಾತ್ರಿ ಬೆಳದಿಂಗಳ ಭ್ರಮೆಯಲ್ಲಿ

ಹೊರಟಿರುವ ಯಾನವೊಂದು ಅಮೂರ್ತದೆಡೆಗೆ

ಭೂಮಿ ಸುತ್ತಲು ಈ ಯಾತ್ರಿ ಬಾನಂಗಳ ಕ್ಷೇತ್ರದಲಿ

ಕಲಿಯುವ ಪಾಠವೊಂದು ಸುಮೂಹುರ್ತದೆಡೆಗೆ


ಹೇಗೆ ಹಗಲಿರುಳಿನ ಹೊರಳಾಟ 

ಭುವಿ ಸುತ್ತ ತಾ ತಿರುಗಿರಲು

ಎರಡು ಮುಖಗಳ ಪೇಚಾಟ

ಮನುಜ ತನ್ನ ತಾ ಅರಿತಿರಲು


ಹಾಗೆ ವರುಷಗಳ ಉರುಳಾಟ 

ರವಿ ಸುತ್ತ ಇಳೆ ಸುತ್ತಿರಲು

ದುರುಳ ಮನಸಿನ ಸಾಗಾಟ

ಸಜ್ಜನರ ಜೊತೆ ಸಾಗಿರಲು

No comments:

Post a Comment