ನನ್ನ ಎದೆಯ ತೋಟದಲ್ಲಿ
ಅರಳಿ ನಿಂತ ಪುಷ್ಪ ನೀನು
ಸುತ್ತ ಬಂದೆ ನಂದನವನ
ಅತ್ತ ಕಂಡೆ ಚಿತ್ತ ಚುಂಬನ
ಬೆಳೆದು ನಿಂತ ಲತೆಗಳಲ್ಲಿ
ಕಣ್ಣ ಕಾಮನೆ ನೀನೆಯೇನು
ಸುಳಿದು ಬಂದ ಗಾಳಿಯಲ್ಲಿ
ಮುದ್ದಿಸುವ ಅಧರ ಜೇನು
ಮನದ ರಾಗ ತಾಳಗಳಿಗೆ
ಮೊದಲ ಹೆಜ್ಜೆ ನೀನೆಯಿಟ್ಟೆ
ಮುಡಿದ ಪ್ರೀತಿ ಭಾವಗಳಿಗೆ
ರಂಗು ತುಂಬಿ ಜೀವ ಕೊಟ್ಟೆ
ನಮ್ಮ ಉಸಿರ ವಲಯಗಳಲ್ಲಿ
ಪ್ರೇಮಿ ಹೆಸರ ವಿನಿಮಯ
ಕೊನೆಯೇ ಇರದ ಜಾಗದಲ್ಲಿ
ಆಡೋ ಚಂಡು ಚಂದ್ರಮ
ಗುರಿ ಮುಟ್ಟುವ ತನಕ,
ವಿಚಾರಿ
No comments:
Post a Comment