ಚಂದಿರ ತುಂಬಿದ ಆ ಬಾನಿನಲ್ಲಿ
ಬೆಳದಿಂಗಳ ಅರಸುವ ಅಂಧರು ಜಗದಲ್ಲಿ
ತಾನಾಡಿದ್ದೇ ಸರಿ ತಾ ಮಾಡಿದ್ದೇ ಸರಿ
ಎನ್ನುವ ಮೂರ್ಖತನ ಜನರಲ್ಲಿ
ಆಡುತ ಮೋಜು ಮಾಡುತ ಮಸ್ತಿ ಮೆರೆಯುವ ಹುಂಬತನ ಮನದಲ್ಲಿ
ಸೂತ್ರವೆ ಹರಿದಿರುವ ಗಾಳಿಯ ಪಟವಿಲ್ಲಿ
ಹಾರುತ ಬಂದಿಹುದು ನೆಲೆಗಾಣದ ತಿರುವಲ್ಲಿ
ಈಗಾಗುವುದೇ ಉರಿ ತಾ ದೂರುವುದೇ ಪರಿ
ವೈಜ್ಞಾನಿಕತೆಯೆನ್ನುವ ಭ್ರಮೆಯಲ್ಲಿ
ನೋಡುವುದೇ ಸತ್ಯ ತಾನಾಡುವುದೇ ಮಿಥ್ಯ
ಮರೆಯುವ ಮಂಪರು ಮಂದಿಯಲ್ಲಿ
ಭರವಸೆ ನೀಡುವ ಸಂತೆಯಲ್ಲಿ
ಮಳೆಹನಿಗಳ ವ್ಯಾಪಾರ ಬಿಂದಿಗೆಯಲ್ಲಿ
ಬದುಕಿನ ನೀತಿ ಬಾಳ ಬಾಧ್ಯತೆ ಭೀತಿ
ತೊರೆಯುತ ಸಾಗುವ ದಾರಿಯಲ್ಲಿ
ವಿಚಾರಿಗಳಾ ಸದ್ದು ವಿಚಾರಗಳೇ ಮದ್ದು
ಏಳು ಬೀಳಿನ ಪಯಣಗಳಲ್ಲಿ
No comments:
Post a Comment