Tuesday, October 19, 2021

ಹುಲ್ಲ ಹೆಣೆದು

 ಅರಳುತಿರುವ ಮೊಗ್ಗು ಒಂದು

ಎದುರು ನೋಡುತಿಹುದು ಭಯದಿ

ಯಾರೋ ನಿಂತು ಕೊಯ್ಯಲಿಂದು 

ಪ್ರೀತಿ ಹೇಳುವರೇನೋ ನಯದಿ


ಭರವಸೆಯ ಬದುಕು ಬಂದು

ಬಯಸದಿರುವ ಬವಣೆ ಭರದಿ

ಕಲಿಸೋ ಪಾಠ ಕುಂಠಿತವೆಂದು

ಕಡಲ ಆಳ ಕವಡೆ ಲೆಕ್ಕದಿ


ಹುಟ್ಟಿ ಬರುವ ಜೀವಿಯೊಂದು

ಸೂತ್ರ ಹರಿದ ಪಾತ್ರಧಾರಿ

ಕ‌ಟ್ಟ ಬಹುದೇನೋ ಒಂದು

ಹುಲ್ಲ ಹೆಣೆದು ಗೂಡ ಬಾಳಲಿ

No comments:

Post a Comment