Thursday, October 28, 2021

ಹುಂಬತನ ಬಗಲಲ್ಲಿ

ಚಂದಿರ ತುಂಬಿದ ಆ ಬಾನಿನಲ್ಲಿ

ಬೆಳದಿಂಗಳ ಅರಸುವ ಅಂಧರು ಜಗದಲ್ಲಿ

ತಾ ಮಾಡಿದ್ದೇ ಸರಿ ತಾ ನಾಡಿದ್ದೇ ಸರಿ

ಎನ್ನುವ ಮೂರ್ಖತನ ಮನದಲ್ಲಿ


ಕಂಡು ಅರಿಯದ ಕಾರಣ ಕರೆಯಲ್ಲಿ

ಹೊಡೆಬಡೆ ಎನ್ನುವ ರೋಷವು ಮಾತಲ್ಲಿ

ನಾನಾಡಿದ್ದೇ ಖರೆ ನಾ ಮಾಡಿದ್ದೇ ಬರೆ

ಎನ್ನುವ ಹೇಡಿತನ ಜನರಲ್ಲಿ


ಅಸತ್ಯವನಾಡುವ ಬಡತನ ಮಾತಲ್ಲಿ

ಅನುಸರಣೆಯಿಲ್ಲದ ಅನುಕರಣೆ ನಡೆಯಲ್ಲಿ

ತಾ ನಡೆದದ್ದೇ ದಾರಿ ತಾ ನೋಡಿದ್ದೇ ಭಾರಿ

ಎನ್ನುವ ಹುಂಬತನ ಬಗಲಲ್ಲಿ


ಸ್ವಂತಿಕೆಯಿಲ್ಲದ ಶೂರರು ಸೂರಲ್ಲಿ

ಹಿತನುಡಿಯ ಕೇಳದ ಕಗ್ಗರು ಭುವಿಯಲ್ಲಿ

ಇದು ಶಾಂತಿಯಾ ಧರೆ ಇಲ್ಲಿ ನೆಮ್ಮದಿಯೇ ಮರೆ

ಎನ್ನುವ ಕಡುಸತ್ಯ ಜಗದಲ್ಲಿ


ಗುರಿ ಮುಟ್ಟುವ ತನಕ,

ವಿಚಾರಿ

No comments:

Post a Comment