Saturday, November 9, 2013

|| ಏನಿಲ್ಲ ||

ಹುಟ್ಟಿದವ ಬೆಳೆದು ಹಣ್ಣಾಗ ಬೇಕು
ಸತ್ತಾಗ ಸ್ಮಶಾನ ಸೇರಲೆ ಬೇಕು
ಬಾಳಲಿ ಏನಿದೆ ಎಂದು ಯೋಚಿಸು
ಜಗಳ ಮಾಡದೆ ಜಗವ ಪ್ರೀತಿಸು ||

ನಿನ್ನ ಉಳಿವು ಹರಣದಲ್ಲಿ
ನಿನ್ನ ಅಳಿವು ಮರಣದಲ್ಲಿ
ನಿನ್ನ ಗುರುತು ಚರಣದಲ್ಲಿ
ಬದುಕು ಮೂರು ದಿನಗಳಲ್ಲಿ ||

ಮನಸಿನೊಳಗೆ ಬದುಕ ಯುಕ್ತಿ
ಶಾಂತತೆಗೆ ಧ್ಯಾನದ ಭಕ್ತಿ
ಹೋರಾಟಕೆ ತೋಳಿನ ಶಕ್ತಿ
ಹೊಂದುವೆನು ಜೀವನ ಮುಕ್ತಿ ||

ಜೀವಬಂದಾಗ ತೊಂದರೆಯ ಆರಂಭ
ಒಳಿತಿಗಾಗಿ ಇಚ್ಛಿಸುವ ಆಧಾರ ಕಂಬ
ಇಲ್ಲದಿರುವುದನು ಬಯಸುತ ಬಾಳಲು
ಕಾಣದ ದೈವವ ಪ್ರಾರ್ಥಿಸುತ ಬೇಡುವುದು ||

2 comments:

  1. ಬದುಕನ್ನು ಸಾರ್ಥಕ್ಯ ಮಾಡಿಕೊಳ್ಳುವ ನೀತಿಪಾಠದ ಸಾಲುಗಳು.

    ReplyDelete
  2. ಪ್ರತ್ಯಾನದಕ್ಕೆ ಧನ್ಯವಾದಗಳು.

    ReplyDelete