ಹೂವು ಅರಳಲು
ದುಂಬಿಯ
ಆಗಮನ
ತುಟಿಗೆ ತುಟಿ ಚುಂಬಿಸಲು
ಕಾಯಗಳ
ಆಲಿಂಗನ
ಬೆವರ ಮಳೆಯಲಿ
ಸುಖದ ಕೋಡಿ
ಸ್ಪರ್ಶ ಹರ್ಷಕೆ
ತಣಿಯುವ ದೇಹದ ಕಾವುಗಳು...
ಮಧುವನು ಹೀರಲು
ತಣ್ಣಗೆ ನಾಚುತ
ಕೂಡುವ ಕಾಲದಿ
ಎಲ್ಲವ ಮರೆಯುತ
ಬೆರೆಯುವ ದೇಹವು
ಅಪ್ಪುಗೆಯಿಂದಲಿ
ಕಂಪನ ಎದೆಯಲಿ
ಢವ ಢವ ಸದ್ದಲಿ...
ಕರಗುವ ಮನಸಿದು
ಮತ್ತೇರಿಸುತಲಿ
ಮೈ ಮರೆಸುವುದು
ಸೇರುವ ತವಕದಿ
ಕೊರೆಯುವ ಚಳಿಯಲು
ಕಾವಿನ ಕ್ಷಣಗಳು
ಸುರಿಯುವ ಮಳೆಯನು
ಬಯಸುವ ಸಮಯವಿದು...
ಅನುಭವದ ಮಾತಲ್ಲ ತಾನೇ :) ? ... ಇದು "ಕೇಳಿ" ತಿಳಿದದ್ದು :):) ಸುಂದರವಾಗಿದೆ
ReplyDeleteಕೇಳಿ ತಿಳಿದದ್ದು ಒಡ್ಯಾ. ಅನುಭವದ ಮಾತಲ್ಲ ಇದು. ಧನ್ಯವಾದಗಳು.
Deleteತುಂಬಾ ಚೊಲೋ ಇದ್ದು ..ಆದ್ರೆ ಮದ್ವೆಗೆ ಮುನ್ನವೇ ಇಷ್ಟೊಂದು ಆಳವಾಗಿ ( ಕೇಳಿ ) ತಿಳಿದುಕೊಂಡಿದ್ದು / ಕಲ್ಪಿಸಿಕೊಂಡಿದ್ದು ನಿಜಕ್ಕೂ ಆಶ್ಚರ್ಯ ..:D
ReplyDeleteಕಲ್ಪನೆಗೆ ಕೊನೆಯಿಲ್ಲ ಕಲ್ಪಿಸಿಕೊಳ್ಳಲು ಮಿತಿಯಿಲ್ಲ. ಧನ್ಯವಾದಗಳು.
Deleteಸ್ವಾನುಭವ ಉಂಟೇ?
ReplyDeleteಕಲ್ಪನೆಯಲಿ ಸೂರ್ಯನೆ ಅಂಗೈಲ್ಲಿ ಹೀಗಿರುವಾಗ ಇದಕ್ಕೇನಕೆ ಅನುಭವ...? ಧನ್ಯವಾದಗಳು ಶಾರ್.
Deleteಸ್ವಂತ ಅನುಭವವೇ ..?? ಅನುಭವಸ್ಥರ ಮಾತನ್ನು ಕದ್ದು ಕೇಳಿದ್ದೇ ..??
ReplyDeleteಅನುಭವಸ್ಥರ ಮಾತ ಕೇಳಿದ ಅನುಭವ. ಧನ್ಯವಾದಗಳು.
Delete