ಹೋದೆ ನೀನು ಹೇಳದೇನೆ
ಮರಳಿ ಬಾರದ ಊರಿಗೆ
ನಿನ್ನ ಸನಿಹ ಮರೆಯಲ್ಹೇಗೆ
ಎದೆಯ ತುಂಬಾ ನೆನೆಪಿದೆ
ಅಳಿಸಲಾಗದು ನಿನ್ನ ಗುರುತನು
ಹೆಜ್ಜೆಯೆಲ್ಲಾ ನಿನ್ನದೆ
ವರೆಸಲಾಗದ ಚಿತ್ರ ಬಿಡಿಸುತ
ಎತ್ತರದಲಿ ಬೆಳಗಲೆಂದು
ನೀನೆ ಏಣಿಯಾಗಿ ನಿಂತ ಜಾಗ
ನನ್ನ ಹೃದಯದಲ್ಲಿ ಖಾಲಿಯಾಗಿದೆ ||
ನನ್ನ ಕನಸನು ನನಸು ಮಾಡುತ
ನನ್ನ ಖುಷಿಯಲಿ ರಮಿಸಿದೆ
ಬವಣೆ ಬಂದರೆ ಎದೆಯನೊಡ್ಡಿ
ಕಷ್ಟ ನೋಡದಂತೆ ಬೆಳೆಸಿದೆ
ಬಯಸಿದೆಲ್ಲವನು ತಂದು ಕೊಡುತ
ನಿರಾವಲಂಬಿಯಾಗಿ ಮಾಡಿದೆ
ನೋವನೆಲ್ಲವ ಸಹಿಸಿ ಕೊಂಡು
ಜೀವನವನ್ನೆಲ್ಲಾ ಕಳೆದರೂ
ನಾನು ನಗುವಂತೆ ಮಾಡಿದೆ ||
ನಿನ್ನ ಜೀವಕೆ ನಾನೇ ಆಸರೆ
ಕೈ ಮುಗಿದು ಪೂಜಿಸುವೆ ನಿನ್ನನು
ಆರಾಧನೆಯ ಸಮಯಕೆ ನಿನ್ನ ಪಾದವ
ತಲೆಯ ಮೇಲೆ ಇರಿಸದೆ
ಅಲ್ಲೂ ತೋರಿದೆ ನಿನ್ನ ಹಿರಿಮೆಯ
ನೋಡಬಾರದು ಕಷ್ಟವನೆಂದು ಪೇಳಿದೆ
ಜೀವದ ಗೆಳೆಯನಗೆ ಕೊಡುಗೆಯೆಂದು
ಪ್ರೇಮಪಕ್ಷಿಯನೊಂದ ತಂದೆನು
ರಾಜನಂತೆ ಮೆರೆಸುವ ಮುನ್ನವೆ
ಪ್ರಾಣಪಕ್ಷಿಯ ತೊರೆದೆ ನೀನು
ನನ್ನ ಒಂಟಿ ಮಾಡುತ ||
ನನ್ನ ಕನಸನು ನನಸು ಮಾಡುತ
ReplyDeleteನನ್ನ ಖುಷಿಯಲಿ ರಮಿಸಿದೆ
ಬವಣೆ ಬಂದರೆ ಎದೆಯನೊಡ್ಡಿ
ಕಷ್ಟ ನೋಡದಂತೆ ಬೆಳೆಸಿದೆ
appana hirimeya saalugalivu.