ಕಡಲ ತೀರದಲಿ ಮುಸ್ಸಂಜೆ ಘಳಿಗೆಯಲಿ
ಭೊರ್ಗರೆಯುತಿರುವ ಕಡಲಲೆಗಳಲ್ಲಿ
ಕಾಗದದ ದೋಣಿಯನು ಬಿಡುವ ಮೋಜು ನಿನ್ನಲಿ
ಕೈಯ ಹಿಡಿದು ಎಳೆಯುವ ಗೌಜು ಎದೆಯಲಿ
ಹಾಗೆಂದು ನಿನ್ನ ಕೈಯ ಹಿಡಿದಿರುವೆ ಕಾಳಜಿಯಲಿ ||
ಮುಸ್ಸಂಜೆ ಮಬ್ಬಲ್ಲಿ ಮರಳ ಮೆಲೆ ಕೂತಿರಲು
ನನ್ನ ಇನಿಯ ಮಡಿಲಲ್ಲಿ ಮಲಗಿರಲು
ಆ ರವಿಯು ನಾಚಿ ಮುಳುಗುತಿಹನು
ನಮ್ಮ ಎಕಾಂತ ಗುರುತಿಸಿ ಹೊರಟಿಹನು
ಹೇಳೋಣ ಅವನಿಗೆ ಶುಭವಿದಾಯ
ಮರಳಿ ಬಾ ನಾಳೆಗೆ ಎನ್ನುವುದು ನಮ್ಮ ಕಾಯ ||
ಹಿತವಾದ ತಂಗಾಳಿ ತಂಪನ್ನು ತಂದಿರಲು
ಹಕ್ಕಿಗಳ ಇಂಚರವು ಕಿವಿಯನ್ನು ತುಂಬಿರಲು
ನೀರಿನಲಿ ಆಡಲು ಜೊತೆಯಲ್ಲಿ ತೆರೆಗಳು
ಕುಂತಾಗ ನೀನಾಡೊ ಪಿಸು ಮಾತುಗಳು
ಆ ಸ್ವರ್ಗಕೆ ಕಿಚ್ಚು ಹಚ್ಚಲು ಇನ್ನೇನು ಬೇಕು
ಸಂಗಾತಿ ನೀನಾಗಿರಲು ಬದುಕೊಂದೆ ಸಾಕು ||
ನಿಶೆಯು ಬರುತಿಹುದು ಈ ಜಗವ ನೋಡಲು
ದಿಬ್ಬಣದ ಹಾಗೆ ಕೂಗಿಹವು ನಾದದಲಿ ನಿಶಾಚರಗಳು
ಕಡಲ ಭೋರ್ಗರೆತ ಜೊರಯ್ತು ಶಶಿಯು ಮೇಲೇರುತಿರಲು
ಬವಣೆಯನು ಮರೆತು ಬೃಂದಾವನದ ಕಡೆ ಹೋಗೋಣ
ತಿಳಿಯಾದ ವಾತಾವರಣದಲಿ ಕೂರಲು ಬೇಕೇನು ಬಿಂಕ ಬಿನ್ನಾಣ
ಪ್ರೇಮಿಗಳೊಡೆಯ ಬಂದಿಹನು ಬೆಳದಿಂಗಳ ಚೆಲ್ಲುತ ನಮ್ಮನ್ನು ಕಾಯಲು ||
No comments:
Post a Comment