ಭಾವ ಇಲ್ಲದ ಗೀತೆಯಲ್ಲಿ
ಭಾವ ಎಲ್ಲಿ ಹುಡುಕಲಿ
ಚಂದ್ರನಿಲ್ಲದ ಬಾನಿನಲ್ಲಿ
ಬೆಳದಿಂಗಳ ಹೇಗೆ ಕಾಣಲಿ
ಆಗದಂತಹ ಕೆಲಸ ಹೇಳಿ
ನನ್ನ ಅಳೆದು ತೂಗಿದೆ
ಹೃದಯದೂರಿನಲ್ಲಿ ನೆಲೆಸದೆ
ಹೋದೆ ನೀನು ಎಲ್ಲಿಗೆ ||
ನಿನ್ನ ಮೊಜಿನಾಟದಲ್ಲಿ
ಗೊಂಬೆಯಂತೆ ಕುಣಿದೆನು
ಸೂತ್ರ ಹರಿದ ಗೊಂಬೆಯಾಗಿ
ದಾರಿಪಾಲು ಆದೆನು
ಸೌದೆಯಂತೆ ಸುಟ್ಟುಹೊದೆ
ಸಕಲಕಾರ್ಯ ಸಿದ್ಧಿಗಾಗಿ
ಹೊಳೆಯಲ್ಲಿನ ಹೋಮವಾಯ್ತು
ನೆರವೇರಿದ ಕೆಲಸವು ||
ಸೂಜಿಮೊನೆಯ ಕೈಗಳಿಂದ
ನನ್ನ ದೇಹ ಸವರಿದೆ
ಹರಿವ ಎದೆಯ ರಕ್ತದಲ್ಲಿ
ನೀನು ಮಿಂದು ಮುಳುಗಿದೆ
ತೊಲಗಿಸಿದರೇನು ವರಿಸುವ ಮುನ್ನ
ಎಂದೆಂದು ನಗುತಿರು ನೋಡಲು ಚೆನ್ನ ||
No comments:
Post a Comment