Sunday, July 22, 2012

|| ಕಿರಣ ಬಂದಾಗ ||


ರಶ್ಮಿ ಬರಲು ಜಗವು ಬೆಳಗಿತು
ಕವಿದ ಮಂಜು ಕರಗಿತು
ನಿಶೆಯು ದೂರ ಸರಿಯಲು
ನಿಶಾಚರಗಳು ಅಡಗಿ ಕೂತವು
ಜೀವಗಳಿಗೆ ಉತ್ಸಾಹ ಬಂದು
ಸ್ವಂಥ ಕೆಲಸಕೆ ಅಣಿಯಾಯಿತು ||

ಅರುಣೋದಯಕೆ ಬೆಳ್ಳು ಮೂಡಿಬಂತು
ಸೂರ್ಯೋದಯದಲಿ ಬೆಳಕು ಹರಿಯಿತು
ಮರದ ಮೇಲಿಂದ ಇಬ್ಬನಿಯು ಉದುರಲು
ಹೂ ಕಿತ್ತು ಪೂಜೆಯಲಿ ನಿರತರಾದರು ವಿಪ್ರರು
ಮನೆಯನು ಶುಚಿ ಮಾಡಲು ನಾರಿಯು ಮುಂದಾದಳು
ಬಾಗಿಲೆದುರಲಿ ಚಂದದ ರಂಗೋಲಿಯನು ಇಡುತಿಹಳು ||

ಕಿವಿಯನು ತಂಪಾಗಿಸಲು ಬಾನಾಡಿಗಳ ಸಂಗೀತವು
ಉಷೆಯನುಂಡು ಅರಳುತಿವೆ ತಾವರೆಗಳು
ಜಗದ ಸಂಗತಿಗಳನು ಓದಲು ನಿರತರಾದರು
ತಿಂಡಿಯನು ತಿನ್ನಲು ಕರೆಯುತಿಹಳು ಮನದರಸಿಯು
ಮಂದಹಾಸದಿ ಮೇಲೇರಿದನು ಬೆಳಕಿನ ತಾರೆಯು
ಶುಭದಿನವನು ಎದುರು ನೋಡುತಿದೆ ಸೌರಮಂಡಲವು ||

No comments:

Post a Comment