ಸೂರ್ಯ ಮುಳುಗಿದಾಗ ಸಂಗಾತಿ ನೆನಪು
ಚಂದ್ರ ಮೇಲೆ ಬಂದಾಗ ಸಿಹಿಗನಸ ಕಂಪು
ಕಂಪು ನೆನಪು ಜೊತೆಯಲ್ಲಿ ಬೆರೆತು
ನಿನ ಸೇರೊ ಮಿಡಿತದಲಿ ಎದೆಯಲ್ಲಿ ತಂಪು ||
ಪ್ರೀತಿಯಲಿ ಮುಳುಗಿರುವ ಜೊಡಿಯನು ನೋಡುತ್ತ
ಅವರಂತೆ ನಾನಾಗಬೇಕೆಂಬ ಬಯಕೆಯು ಮೂಡುತ್ತ
ತುಡಿತದಲಿ ಮುನಿಸಾಗಿ ಅಸೂಯೆ ಪಡುತ್ತ
ತನ್ನ ಅದೃಷ್ಠ ಬಯ್ಯುತ್ತ ನಿರಾಸೆಯಲಿ ಮನ ಸೊರಗುವುದು ||
ವಯಸ್ಕರ ಕಂಡಾಗ ಬೇಕೆನಿಸುವ ವಯಸು
ಜೊತೆಯಾಗಿ ನಲಿಯುವ ಕನಸು
ಸಿಗದೆ ಹೋದಾಗ ಬರುವಂಥ ಮುನಿಸು
ನನ್ನನ್ನೊಳಗೆ ಸುಳಿದಾಡುವ ಎಕಾಂಗಿ ಮನಸು ||
ಕನಸಲ್ಲಿ ಕಾಣುವರು ಕಣ್ಮಣಿ ಜೊತೆಗಿನ ಸರಸ
ನನಸಲ್ಲಿ ಮಾಡುವರು ಕಣ್ಮಣಿಯೊಡನೆ ವಿರಸ
ಮನಸಲ್ಲಿ ತುಂಬಿರೊ ಆಸೆಯನು ತಾಳಲಾಗದು
ತರುಣನ ಜೊತೆ ನಡೆದರು ತನ್ಮಯತೆ ಹೇಳಲಾಗದು ||
ಎಲ್ಲರನು ಮೆಚ್ಚಿಸುವ ಕಾರ್ಯವನು ಸುಮ್ಮನೆ ಮಾಡಬೇಕು
ಸಂಗಾತಿ ಸಂಪ್ರೀತಿ ಪಡೆಯಲು ಸುಸ್ತಾಗಿ ಹೋಗಬೇಕು
ಕೊನೆಯಲ್ಲಿ ಜೀವನವೆಲ್ಲ ಜೊತೆಯಾಗಿ ನಡೆದರೆ ಸಾಕು ||
No comments:
Post a Comment