Sunday, July 29, 2012

|| ಕಾಲ ಚಕ್ರ ||

ತಿರುಗುತಲೆ ತಿರುಗುತಲೆ
ಮತ್ತೆ ಬರುವುದು ಅಲ್ಲಿಗೆ
ಆಳಾಗಿ ದುಡಿದು ಅರಸನಂತೆ ಉಣ್ಣುವರು
ಅರಸನಂತೆ ಮೆರೆದು ಆಳಾಗಿ ಗೇಯುವರು
ಆಳಾದರೇನು, ಅರಸನಾದರೇನು
ಮಾನವನಾಗಿ ಹುಟ್ಟಿದ್ದು ದೇವನ ವರವು ||
ಜನಿಸಿದ ಜೀವವು ಬದುಕುವ ಕಾಲದಲಿ
ಏರಿಳಿತ ಕಾಣುವುದು ನಡೆಸುವ ಸಂಸಾರದಲಿ
ಹುಟ್ಟುಸಾವು ಬದುಕಿನ ಆದಿ ಅಂತ್ಯವು
ಸತ್ತ ಮೇಲೆ ಬೆಳೆವರು ಬ್ರೂಣವಾಗಿಯೆ
ಪುನಃ ತಾಯಿಗರ್ಭದಲ್ಲಿ ಮಾಂಸ ಮುದ್ದೆಯಂತೆಯೆ
ತಿರುಗಿ ತಿರುಗಿ ಅಭಿನಯಿಸ ಬೇಕು ಜೀವನ ನಾಟಕದಲಿ ||

ಮಳೆಹನಿಗಳೆಲ್ಲ ಹರಿದು... ಹಳ್ಳವೊಂದರಲಿ ಬೆರೆತು
ಹೊಳೆಯ ಒಡಲನು ಸೇರುವ ಮಾತಿಲ್ಲಿ
ಹೊಳೆಗಳೆಲ್ಲವು ಓಡುತ... ತುಂಬಿದ ನದಿಯನು ಸೇರುತ
ಕಡಲ ಗರ್ಭದಲಿ ಮುಳುಗುವ ಹಾಡಿಲ್ಲಿ
ಕರಿಯ ಮುಗಿಲಾಗಿ ಹಾರುತ ತಿರುಗಿ ಭುವಿಯ ಬಾಯರಿಕೆ ನೀಗುತ
ಕಾಲದ ತಾಳಕೆ ತಿರುಗುವ ಚಕ್ರವು ಕುಣಿಸುವ ನಾಟ್ಯವು ಹೀಗಿಲ್ಲಿ ||

No comments:

Post a Comment