ನನ್ನ ಉಸಿರಾಗು ಬಾರೆ
ಉಸಿರು ಹೊಗುವ ಸಮಯದಲಿ
ನೆರಳಾಗಿ ಇರುವೆ
ಬಿಸಿಲಲಿ ನೀ ನಿಂತ ಕ್ಷಣದಲಿ
ಸೂರಾಗಿ ಬರುವೆ
ನೆನೆಯದಂತೆ ಸುರಿವ ಸೋನೆಯಲಿ
ರಾಜನಾಗಿ ಬೆಂಗಾವಲಾಗುವೆ
ನೀ ಕೊಟ್ಟರೆ ಜಾಗವ ಮನಸಿನಲಿ ||
ಉತ್ತರದಲ್ಲಿ ದ್ರುವತಾರೆ
ಸ್ಥಿರವಾಗಿ ಮಿನುಗುವ ಹಾಗೆ
ನಿನ್ನ ಬಾಳಿಗೆ ಬೆಳಕಾಗಿ
ನಿಲ್ಲುವೆನೆಂದೂ ನಲುಗದೆ ಜೊತೆಯಾಗಿ
ಮೈಯ ಹಿಂಡಿ ಎಣ್ಣೆ ತೆಗೆದು
ಆರದಂತೆ ಉರಿಸುವೆ ನಂದಾದೀಪವನು
ಬೆಳಗುತ ನಿನ ಜೀವನ ||
ಕಾರ್ಮೊಡ ಕವಿದಿರಲು
ಮಳೆಹನಿಯ ಆಸೆ ಮೂಡುವುದು
ಬೆಳ್ಮುಗಿಲ ಕಾಣಲು
ಮೇಲೇರಿ ಕದಿಯುವ ಬಯಕೆಯಲಿ ಸೋಲುವೆನು
ನನ್ನ ಬಾಹು ಬಂಧನದಲಿ
ನೀ ಬಂಧಿಯಾಗಿರಲು
ಜಗವನ್ನೇ ಸೆಳೆಯುವೆನು ಆ ದೇವಕಣದಂತೆ ||
ಉಸಿರು ಹೊಗುವ ಸಮಯದಲಿ
ನೆರಳಾಗಿ ಇರುವೆ
ಬಿಸಿಲಲಿ ನೀ ನಿಂತ ಕ್ಷಣದಲಿ
ಸೂರಾಗಿ ಬರುವೆ
ನೆನೆಯದಂತೆ ಸುರಿವ ಸೋನೆಯಲಿ
ರಾಜನಾಗಿ ಬೆಂಗಾವಲಾಗುವೆ
ನೀ ಕೊಟ್ಟರೆ ಜಾಗವ ಮನಸಿನಲಿ ||
ಉತ್ತರದಲ್ಲಿ ದ್ರುವತಾರೆ
ಸ್ಥಿರವಾಗಿ ಮಿನುಗುವ ಹಾಗೆ
ನಿನ್ನ ಬಾಳಿಗೆ ಬೆಳಕಾಗಿ
ನಿಲ್ಲುವೆನೆಂದೂ ನಲುಗದೆ ಜೊತೆಯಾಗಿ
ಮೈಯ ಹಿಂಡಿ ಎಣ್ಣೆ ತೆಗೆದು
ಆರದಂತೆ ಉರಿಸುವೆ ನಂದಾದೀಪವನು
ಬೆಳಗುತ ನಿನ ಜೀವನ ||
ಕಾರ್ಮೊಡ ಕವಿದಿರಲು
ಮಳೆಹನಿಯ ಆಸೆ ಮೂಡುವುದು
ಬೆಳ್ಮುಗಿಲ ಕಾಣಲು
ಮೇಲೇರಿ ಕದಿಯುವ ಬಯಕೆಯಲಿ ಸೋಲುವೆನು
ನನ್ನ ಬಾಹು ಬಂಧನದಲಿ
ನೀ ಬಂಧಿಯಾಗಿರಲು
ಜಗವನ್ನೇ ಸೆಳೆಯುವೆನು ಆ ದೇವಕಣದಂತೆ ||
No comments:
Post a Comment