ಕಂಗಳ ಹಾಡಿಗೆ
ಎದೆಯಲಿ ಕಲರವ
ಹೃದಯದ ಕಡಲಿದು
ಕಲಕಿದೆ ಕಲ್ಪನೆಯಲಿ
ಅಲೆಗಳು ಏಳುತ
ಕಾಡಿದೆ ಚಿತ್ತವನು ||
ತಂಪಿನ ಭಾವವು
ತಣ್ಣಗೆ ಸೋಕಲು
ಹುರುಪಿನ ಹೀಗ್ಗುಗಳು
ಮುದ್ದಿನ ಮನಸಲಿ
ಮೂಡಿದ ಚಿತ್ರವ
ಕರೆದೊಯ್ದಿದೆ ಅಂಗಳಕೆ ||
ಪ್ರಕೃತಿಯ ಸೊಬಗನು
ಮೆಲ್ಲಗೆ ಮೆಲಕುತ
ಮೆರೆಯಲು ತುಂಬಿದೆ
ದೇಹಕೆ ಸ್ಥೈರ್ಯವ
ನಿಸರ್ಗವು ನವಿರಾಗಿದೆ
ನೋಡುತ ನಮಿಸುವ ||
ನಿಸರ್ಗವನ್ನು ನಾವು ನಮಿಸುತ್ತೇವೆ.
ReplyDeleteDhanyavadagaLu. Sir
ReplyDelete