ಪುಕ್ಸಟೆ ತರೋದಿಲ್ಲ ನನ್ನಾಣೆ
ತಲೆ ಕೆಟ್ಟಿ ಅಗೋಯ್ತು ಹನ್ನೆರ್ಡಾಣೆ
ಚೌಕಾಸಿ ಮಾಡಿರುವೆ ಎಂಟಾಣೆ
ಬಿಡಿಗಾಸು ಕೊಟ್ಟಿರುವೆ ನಾಲ್ಕಾಣೆ
ನಂಬು ನನ್ನನ್ನ ನಿಜ ನಿನ್ನಾಣೆ ||
ಕಂಜುಸು ನಾನೇನೆ ಹಣಕಾಗಿ
ನೀತಿ ಬಿಡಲೊಲ್ಲೆ ಜಿಪುಣತನಕಾಗಿ
ಬಿಟ್ಟಿ
ಮಾಡೊಲ್ಲ ಊಟಕಾಗಿ
ಉಚಿತವಾಗಿ
ಪಡೆಯೊಲ್ಲ ಆತ್ಮಾಭಿಮಾನಕಾಗಿ
ಸಣ್ಣತನ ಮಾಡೋದಿಲ್ಲ ಸ್ವಾಭಿಮಾನಕಾಗಿ ||
ಬೇರೆಯವರೆದುರು ಬಾಗೋದಿಲ್ಲ
ನಂಬಿದವರ ಮಾನ ಕಳೆಯೋದಿಲ್ಲ
ಉಸಿರಾಟಕೆ ಸುಂಕ ನೀಡೋದಿಲ್ಲ
ನಂಬಿಕೆ ಬಿಟ್ಟು ಬಾಳೋದಿಲ್ಲ
ನಿನಗಾಗಿ ನಿಯತ್ತು ಬಿಡೋದಿಲ್ಲ ||
ಮಾನವಂತನಾಗಿಯೂ ನೀತಿವಂತನಾಗಿಯೂ ಬದುಕೋ ಕಾವ್ಯ ನಾಯಕನ ಮನಸು ಮೆಚ್ಚುಗೆಯಾಯಿತು.
ReplyDeleteಧನ್ಯವಾದಗಳು ಸಾರ್
Deleteನಂಬಿಕೆ ಬಿಟ್ಟು ಬಾಳೋದಿಲ್ಲ
ReplyDeleteನಿನಗಾಗಿ ನಿಯತ್ತು ಬಿಡೋದಿಲ್ಲ....sundara saalugalu...
ಧನ್ಯವಾದಗಳು Sri Ji. :)
Deleteಚನ್ನಾಗಿದೆ ಸರ್ ನಿಮ್ಮ ಕವನ...
ReplyDeleteಧನ್ಯವಾದಗಳು Viji :)
Delete