Thursday, March 20, 2014

ಹೊಣೆಗಾರ್ತಿ ನಾನಲ್ಲ

ಗುಂಗುರು ಗುಂಗುರು
ಗುಂ ಗುಂ ಗುಂಗುರು
ಗುಂಗುರು ಕೂದಲು
ನೋಡೋಕೆ ಚಂದಾನೆ
ಹುಡುಗಿ ಎನ್ ಚಂದಾನೆ
ಗುಂಗುರು ಕೂದಲು ಸುತ್ತಿ ಆಡೊ
ಭಾಗ್ಯವು ಸಿಗಲಿ ನಂಗೇನೆ

ಎತ್ತೋ ಎಳನೀರು ಕುಡಿಯೊದಿಲ್ಲ
ಬಿತ್ತೊ ಬೀಜಕ್ಕೆ ಮೊಳಕೆಯಿಲ್ಲ
ಹರಿವ ಹೊಳೆಯಲ್ಲಿ ನೀರೇ ಇಲ್ಲ
ಆಡಬಹುದು ಬೇಲೆಯಲ್ಲಿ
ದಾಂಡ್ಚಂಡು ಆಟಾನ

ಜಂಬೆ ಹಣ್ಣಿನಂತ ಹೆಣ್ಣು ನಾನು
ನೆಲ್ಲಿಯಂತೆ ರುಚಿಯು ದೋಸ್ತಿ
ಹುಳಿಯ ಹಿಂಡೋದಿಲ್ಲ
ಹಾಲಿನಂತ ಸಂಸಾರದಲ್ಲಿ
ನಿಮ್ಮ ಸುಖಿಸೊ ಮೋಹದ ತಪ್ಪಿಗೆ
ಹೊಣೆಗಾರ್ತಿ ನಾನೆನಲ್ಲ

6 comments:

  1. ಸರಸ ಸಂಭಾಷಣೆ ರೋಚಕವಾಗಿದೆ.
    ಬಳಸಿದ ಗ್ರಾಮೀಣ ಭಾಷಾಸೊಗಡು ಮನಸೆಳೆಯಿತು.
    ಅಂದಹಾಗೆ ಇದು ನಮ್ಮದೇ ಸ್ವಾನುಭವವೇ? ;)

    ReplyDelete
    Replies
    1. ಸ್ವಾನುಭವವಲ್ಲ ಇದು. ಸುಮ್ಮನೆ ಮನಸ್ಸಿಗೆ ತೋಚಿದ್ದನ್ನು ಬರೆದಿದ್ದು. ಧನ್ಯವಾದಗಳು.

      Delete