ಬಂಡೆಯ ಮೇಲಿನ ಹಸಿಗಳಲಿ
ಹಾಸಿಗೆಯ ಹಾಸುವ ಕನಸಿನಲಿ
ವಾಸವ ಮಾಡುವ ಮನೆಯಲಿ
ದುರ್ಗಂಧದ ವಾತಾವರಣದಲಿ
ಒಳಿತನ್ನು ಕೆದುಕಿದ ಕ್ಷಣಗಳಲಿ
ನಾನಿಲ್ಲ ತಪ್ಪು ನನದಲ್ಲ ||
ಗಾನಸುಧೆಯ ಆಲಿಸುತಲಿ
ಅಪಶ್ರುತಿಯ ನುಡಿಸುತಲಿ
ಸುಸ್ವರವು ಕರ್ಕಶದಲಿ
ಆಲಾಪನೆಯ ಉಸಿರಿನಲಿ
ಕದಡುವ ಸಮಯದಲಿ
ನಾನಿಲ್ಲ ತಪ್ಪು ನನದಲ್ಲ ||
ಧ್ಯಾನ ಮಾಡುವ ಹಂತದಲಿ
ಪೂಜೆಯ ಘಂಟಾ ಶಬ್ಧದಲಿ
ಸಿಡುಕು ಗೊಂದಲ ಎಬ್ಬಿಸುತಲಿ
ಭಗವಂತನ ನಾಮ ಸ್ಮರಣೆಯಲಿ
ಹುಳುಕು ಮಾಡುವ ಹೊತ್ತಿನಲಿ
ನಾನಿಲ್ಲ ತಪ್ಪು ನನದಲ್ಲ ||
ಅಂತಹ ವಾತಾವರಣದ ಕಾರಣರು ಪಾಪಾತ್ಮರೂ ವಿಚಾರಿಗಳೇ. ತಾವು ಅಲ್ಲಿಲ್ಲ ಅದಕೇ ಪುಣ್ಯಾತ್ಮರೂ.
ReplyDeleteನಿಮ್ಮ ಪ್ರೋತ್ಸಾಹದ ಮಾತುಗಳಿಗೆ ನನ್ನ ಧನ್ಯವಾದಗಳು.
Delete