ಆ ಸುಂದರ ಚೈತ್ರದ
ಚಿಗುರಲ್ಲಿ ಅಗಲಿರಲು
ಅದೆ ಹಸಿರ ಸಿರಿಯಲ್ಲಿ
ಉಸಿರು ನಿಂತಿರುವುದು ||
ಕೋಗಿಲೆಯು ಕೂಗಿರಲು
ಇಂಪಾಗಿ ಕೂಹು ಕೂಹು
ಕಿವಿಯಲ್ಲಿ ಕೇಳಿರುವುದು
ಕರ್ಕಷದ ಗುಸು ಗುಸು ||
ಎಳೆಗೂಸು ಮಡಿಲಲ್ಲಿ
ನೀ ನೀಡಿದ ಉಡುಗೊರೆ
ಮತ್ಯಾರು ಪೊರೆಯುವರು
ನಾ ಪೋಷಿಸಲಾಗದೆ ಸತ್ತರೆ ||
ಕೇಳುತಿದೆ ಬೆಳೆಯುತಿರಲು
ಅಮ್ಮನ್ನೆಲ್ಲೆಂಬ ಪ್ರಶ್ನೆಗಳನು
ಮರದ ಅಡಿಯಲ್ಲಿ ಕೂತು
ರೆಂಬೆಯಲ್ಲಿರುವಳೆಂಬ ಮಾತು ||
ಆಸೆ ಕಮರಿದರು ಬದುಕಿರುವೆ
ಬೆಳಗುವ ದೀಪಕೆ ಎಣ್ಣೆಯಾಗಿರುವೆ
ನಮ್ಮ ಕನಸು ನನಸಾಗಲೆಂದು
ಉಳಿದಿದೆ ತಿಳಿಯಾದ ಭರವಸೆಯೆಂದು ||
ಚಿಗುರಲ್ಲಿ ಅಗಲಿರಲು
ಅದೆ ಹಸಿರ ಸಿರಿಯಲ್ಲಿ
ಉಸಿರು ನಿಂತಿರುವುದು ||
ಕೋಗಿಲೆಯು ಕೂಗಿರಲು
ಇಂಪಾಗಿ ಕೂಹು ಕೂಹು
ಕಿವಿಯಲ್ಲಿ ಕೇಳಿರುವುದು
ಕರ್ಕಷದ ಗುಸು ಗುಸು ||
ಎಳೆಗೂಸು ಮಡಿಲಲ್ಲಿ
ನೀ ನೀಡಿದ ಉಡುಗೊರೆ
ಮತ್ಯಾರು ಪೊರೆಯುವರು
ನಾ ಪೋಷಿಸಲಾಗದೆ ಸತ್ತರೆ ||
ಕೇಳುತಿದೆ ಬೆಳೆಯುತಿರಲು
ಅಮ್ಮನ್ನೆಲ್ಲೆಂಬ ಪ್ರಶ್ನೆಗಳನು
ಮರದ ಅಡಿಯಲ್ಲಿ ಕೂತು
ರೆಂಬೆಯಲ್ಲಿರುವಳೆಂಬ ಮಾತು ||
ಆಸೆ ಕಮರಿದರು ಬದುಕಿರುವೆ
ಬೆಳಗುವ ದೀಪಕೆ ಎಣ್ಣೆಯಾಗಿರುವೆ
ನಮ್ಮ ಕನಸು ನನಸಾಗಲೆಂದು
ಉಳಿದಿದೆ ತಿಳಿಯಾದ ಭರವಸೆಯೆಂದು ||
ಭರವಸೆ ತಿಳಿಯಾಗಿದೆ ಕಣಪ್ಪಾ. ಅಸ್ತು!
ReplyDeleteನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು
ReplyDelete