ನಾ
ಹಾಡೊ ಭಾವಗೀತೆ
ನೀ
ಬರೆದ ಪ್ರೇಮಗೀತೆ
ಅನುಭವಿಸಿ ಹಾಡಿದರೆ
ಅನಂದ ಭಾಷ್ಪವು
ನೋವುಗಳ ಹೇಳಿದರೆ
ಕಣ್ಣೀರ ಕಾದಂಬರಿಯು
ಯಾವರ್ಥ ನೀಡಲಿ ಹೇಳು
ಮನಸಿಚ್ಚೆ ಮುರಿಯದೆ ಮೀಟು ||
ಒಲವ ರಾಗದ ಪಲ್ಲವಿಯು
ನೋವು ನಲಿವಿನ ಚರಣಗಳು
ನಿನ್ನ ದನಿಯಲೆ ಗುನುಗುವುದು
ಸಾಧಿಸದೆ ಹೋಗುವ ಪದಗಳು
ಶಬ್ಧಗಳಲ್ಲಿ ಸ್ತಬ್ದವಾಗಿವೆ ಶಬ್ದಗಳು
ಕಿವುಡು ಕಿವಿಯಲಿ ಕೇಳದು
ಮೂಕ ಮನಸಿನ ಮಾತುಗಳು ||
ಕಣ್ಣು ಹೇಳಿತು ಮನಸ್ಸಿಗೆ ಇವಳೆನ್ನ ಮನದರಸಿ, ಮನಸೋ ಇಚ್ಚೆ ಇಷ್ಟಪಟ್ಟರೆ ಹೃದಯದ ಗತಿ ಏರು ಪೇರಾಗುವುದು. ಅವಳು ನುಡಿಸಲು ಮನ ಹಾಡುವುದು. ಭಾವ ಪ್ರಸ್ತುತಿ ತುಂಬಾ ಚೆನ್ನಾಗಿದೆ ಮತ್ತಷ್ಟು ಸಾಗಲಿ ಕಾವ್ಯಗಳ ಪಯಣ.
ReplyDeleteನಿಮ್ಮ ಪ್ರೋತ್ಸಾಹದ ಮಾತುಗಳಿಗೆ ನನ್ನ ಧನ್ಯವಾದಗಳು.
Delete