Monday, September 2, 2013

|| ವಿಚಾರಿ ||

 "ವಿಚಾರಿ" ಎಂಬ ಕಾವ್ಯನಾಮದೊಂದಿಗೆ...

Add caption

ಸೋತ ಮನಸು
ಹೊಸದು ಕನಸು
ನನಸು ಮಾಡಲೆ ಹೇಳು ನೀ ವಿಚಾರಿ ||

ಕೆಡುವ ಕಾಲ
ನಾಯಿ ಬಾಲ
ಸರಿ ಮಾಡಲಾಗದು ಹೇಳು ನೀ ವಿಚಾರಿ ||

ದೇವರ ಅಸ್ತಿತ್ವವನು
ತರ್ಕ ಮಾಡುವುದು
ಸರಿಯಾದ ಯೋಚನೆಯೆ ಹೇಳು ನೀ ವಿಚಾರಿ ||

ವಾದಿಸ ಬೇಕೆ ಮಿಥ್ಯವನು
ಪ್ರತಿಪಾದಿಸ ಬೇಕು ಸತ್ಯವನು
ನಿಜವಾದ ನೈಜತೆಯಿರಬೇಕೆಂದು ಹೇಳು ನೀ ವಿಚಾರಿ ||

ತೊರೆಯ ಬೇಕು ಸುಳ್ಳುತನ
ಮೆರೆಯ ಬೇಕು ಸತ್ಯತನ
ಜಗದಲಿ ಜ್ಞಾನಿಯಾಗಲೆ ಹೇಳು ನೀ ವಿಚಾರಿ ||

ಬದುಕಿನ ಕೆಟ್ಟ ಸಮಯಗಳು
ಅಂಬೆಗಾಲಿಡುವ ಮಗುವಿನ ತರ
ನಿಧಾನದ ಸಮಯವ ಪ್ರೀತಿಸೆಂದು ಹೇಳು ನೀ ವಿಚಾರಿ ||

ಹೆತ್ತವರು ಹೇಳುವರೆಂದು ಓದುವರೇನು
ಓದಿದವರೆಲ್ಲ ಉತ್ತುಂಗದ ಶಿಖರದಲ್ಲಿರುವರೇನು
ಓದದೇ ಇರುವವರು ಆಗಲಿಲ್ಲವೆ ಗೌರವಿಸುವ ರತ್ನಗಳೆಂದು ಹೇಳು ನೀ ವಿಚಾರಿ ||

ಉದ್ಯೋಗಕೆಂದು ಕಲಿಯದೆ
ಬುದ್ಧಿಗಾಗಿ ಓದಲು
ಸುಜ್ಞಾನಿಗಳ ಸಮಾಜ ನಿರ್ಮಿಸಬಹುದಲ್ಲವೇ ಹೇಳು ನೀ ವಿಚಾರಿ ||

ಕಲಿತಿರಲು ಉದ್ಯೋಗವನ್ನೇ ಮಾಡಬೇಕೆ
ಕೃಷಿಯೆಂದರೆ ಕೀಳು ಭಾವನೆಯೇಕೆ
ಕೃಷಿಯಿಲ್ಲದೆ ಉದ್ಯೊಗವೊಂದರಿಂದಲೆ ಹೊಟ್ಟೆ ತುಂಬುವುದೇ ಹೇಳು ನೀ ವಿಚಾರಿ ||

ಊರ ಮೇಲೆ ಊರು ಬಿದ್ದಾಗ
ಶಾನುಭೋಗನು ತಲೆ ಕೆಡಿಸಿಕೊಳ್ಳದಾಗ
ಊರಿಗಾದಂತೆ ಪೋರನಿಗಾಗುವುದೆಂದು ತಿಳಿಯಲೆ ಹೇಳು ನೀ ವಿಚಾರಿ ||

ಎಲ್ಲರು ಒಂದೆ ಕೆಲಸ ಮಾಡುವಾಗ
ತಪ್ಪೋ ಒಪ್ಪೋ ಯೋಚಿಸದೆ
ಗುಂಪಿನಲಿ ಗೋವಿಂದ ಎನ್ನಲೆ ಹೇಳು ನೀ ವಿಚಾರಿ ||

ಮೂಕ ಪ್ರಾಣಿಯ ವೇದನೆ
ಅದನರಿತಾಗ ಸ್ಪಂದನೆ
ಜೀವದ ಭಾವನೆಗೆ ದಯೆ ಇರಲಿ ಹೇಳು ನೀ ವಿಚಾರಿ ||

ಬಡವನಿಗೆ ಕರುಣೆಯಿರಲಿ
ಅಸಹಾಯಕನಿಗೆ ಸಹಾಯವಿರಲಿ
ಪರೋಪಕಾರಿಯಾಗಿ ಬದುಕಬೇಕು ಹೇಳು ನೀ ವಿಚಾರಿ ||

ಬೇಲಿಯೇ ಎದ್ದು ಹೊಲ ಮೇಯಲು
ಗುರುವೇ ಅಡ್ಡದಾರಿಯಲಿ ಸಾಗಲು
ಶಿಷ್ಯಂದಿರ ಪಾಡು ಸುಗಮವೇ ಹೇಳು ನೀ ವಿಚಾರಿ ||

ಕಳ್ಳನ ಕೈಯಲ್ಲಿ ಕೀಲಿ ಕೊಡಲು
ಸೋಮಾರಿಗೆ ಜವಾಬ್ದಾರಿ ನೀಡಲು
ಕೆಲಸವು ಸುಸೂತ್ರವಾಗಿ ಸಾಗುವುದೇ ಹೇಳು ನೀ ವಿಚಾರಿ ||

ಆಕಳು ಕಪ್ಪಾದರೆ ಹಾಲು ಕಪ್ಪಲ್ಲ
ಬೆಳ್ಳಗಿರುವುದೆಲ್ಲ ಹಾಲಲ್ಲ
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಶುದ್ಧಿ ಮುಖ್ಯವೆಂದು ಹೇಳು ನೀ ವಿಚಾರಿ ||

ಕೈಲಾದರೆ ಉಪಕರಿಸು
ಇಲ್ಲವೆಂದರೆ ಸಹಕರಿಸು
ಉಪದ್ರವಿಯಾಗಿ ಬದುಕದಿರೆಂದು ಹೇಳು ನೀ ವಿಚಾರಿ ||

ನಲಿವಿನಲಿ ಸಂತೋಷವಿರಲಿ
ನೋವಿನಲಿ ಸಾಂತ್ವನವಿರಲಿ
ಸಮಯೋಚಿತ ಪ್ರತಿಕ್ರಿಯೆಯಿರಲೆಂದು ಹೇಳು ನೀ ವಿಚಾರಿ ||

ಹೆತ್ತವರ ಹೊಟ್ಟೆಯುರಿಸದಿರು
ಸಂಗಾತಿ ಕೈಗೊಂಬೆಯಾಗದಿರು
ಸರಿಯಾದ ಒಲವಲಿ ಕಣ್ಣುಗಳಂತೆ ನೋಡೆಂದು ಹೇಳು ನೀ ವಿಚಾರಿ ||

ನಾವು ಬಯಸಿರುವ ಜೀವವೇ ಬೇಕೆ
ನಮ್ಮ ಇಷ್ಟಪಟ್ಟಿರುವ ಪ್ರೀತಿಯೇ ಸಾಕೆ
ನಂಬಿಕೆಯಲಿ ಅರ್ಥೈಸಿಕೊಂಡು ಜೊತೆಯಾಗಲು ಹೇಳು ನೀ ವಿಚಾರಿ ||

ಮನಸನರಿತವರು ಜೊತೆಯಾಗಲು
ಅತಿ ಕೆಟ್ಟ ಸಮಯದಲು ಆಸರೆಯಾಗಲು
ಸೋಲಿನಲಿ ಸ್ಪಂದಿಸಿದಾಗ ನೆಮ್ಮದಿಯಿಂದಿರಬಹುದೆಂದು ಹೇಳು ನೀ ವಿಚಾರಿ ||

ಹಾಸಿಗೆ ಇದ್ದಷ್ಟೆ ಕಾಲು ಚಾಚಲು
ಅತಿ ಆಸೆಯನು ತೊರೆಯಲು
ಸಾಲವೆಂಬ ಶೂಲದಿಂದ ಪಾರಾಗಲು ಸಾಧ್ಯವೆಂದು ಹೇಳು ನೀ ವಿಚಾರಿ ||

ಎಲ್ಲೆಯಿಲ್ಲದೆ ಎದುರುನೋಡವುದು
ನೆರವೇರದಾಗ ಮನಸಿಗೆ ಘಾಸಿಯಾಗುವುದು
ತಿಳಿದಿರ ಬೇಕು ನಿರೀಕ್ಷೆಗಳೇ ನೋವೆಂದು ಹೇಳು ನೀ ವಿಚಾರಿ ||

ಒಳಿತಾದರೆ ನುಡಿಯುತ್ತಾರೆ
ಕೆಡುಕಾದರೆ ಕೂಗುತ್ತಾರೆ
ಹೇಳುವವರ ಮಾತಿಗೆ ತಲೆಕೆಡಿಸಿಕೊಂಡರೆ ಕಾರ್ಯವಾಗದೆಂದು ಹೇಳು ನೀ ವಿಚಾರಿ ||

ಉದ್ದೇಶ ಪೂರ್ವಕ ತಪ್ಪನ್ನ ಎಸಗುವುದು
ಪರರ ಮಾತಿಗೆ ಹೆದರಿ ಬದುಕುವುದು
ಸಮಾಜದ ಮಾತಿಗಾಗಿ ಮನದ ಅಸೆಗಳ ಬಲಿ ಕೊಡುವುದು ಸರಿಯೇ ಹೇಳು ನೀ ವಿಚಾರಿ ||

ಪೊಳ್ಳು ಭರವಸೆಳಿಂದ ನಾಯಕನಾಗುವುದು
ನೀತಿ ನಿಯತ್ತಿಲ್ಲದೆ ವ್ಯವಹರಿಸುವುದು
ದೇಶದ ಉದ್ಧಾರದ ಹೆಸರಲ್ಲಿ ಸ್ವಾರ್ಥ ಸಾಧನೆ ಮಾಡುವುದು ಸಮಂಜಸವೇ ಹೇಳು ನೀ ವಿಚಾರಿ ||

ಮನಸಿಗೆ ತೋಚಿದಂತೆ ಮಾತನಾಡುವುದು
ಸ್ವಲಾಭಕ್ಕೆ ರಾಜನೀತಿಯನೆ ಮಾರಿಕೊಳ್ಳುವುದು
ಬೆಲೆಯಿಲ್ಲದ ಮಾತನಾಡುತ ಪಕ್ಷಾಂತರಿಯಾಗುವುದು ಸರಿಯಲ್ಲವೆಂದು ಹೇಳು ನೀ ವಿಚಾರಿ ||

ದೂರದ ಬೆಟ್ಟ ಕಣ್ಣಿಗೆ ಸುಂದರವಾಗಿರುವುದು
ಸನಿಹದಿಂದ ನೋಡಿದಾಗ ನಿಜ ತಿಳಿವಿದು
ಯಾರನ್ನು ಅರಿಯದೆ ಬಿಂಬಿಸುತ ನಂಬುವುದು ಸರಿಯೇ ಹೇಳು ನೀ ವಿಚಾರಿ ||

ಬಿಡಿಸಲಾಗದ ಒಂದು ಒಗಟು
ಪ್ರತಿಯೊಂದು ಹೆಣ್ಣಿನ ಮನಸು
ಪ್ರತಿಕ್ರಮದಲ್ಲಿ ಸ್ತ್ರೀಯೊಳಗಿನ ಭಾವನೆ ಅರ್ಥೈಸಿಕೊಳ್ಳಲಾಗದು ಹೇಳು ನೀ ವಿಚಾರಿ ||

ಯಾವುದೋ ಆಸೆಗೆ ದೂರತೀರಕೆ ಜಾರಲು
ಬಯಸಿದೆಲ್ಲವ ನೆನೆದು ಗಳಿಸಲಾಗದಿರಲು
ಹತಾಶರಾಗದೆ ಧನಾತ್ಮಕವಾಗಿ ಯೋಚಿಸುತ ಛಲದಿಂದ ಸಾಗಲು ಹೇಳು ನೀ ವಿಚಾರಿ ||

ಅಗಿರುವದೆಲ್ಲ ಒಳ್ಳೆಯದಕ್ಕೆ
ಆಗುವುದೆಲ್ಲ ಒಳ್ಳೆಯದಕ್ಕೆ
ಕಾಲಾಯ ತಸ್ಮೈ ನಮಃ ಎನ್ನುತ್ತ ಒಲ್ಲೆಯದನ್ನೆ ನೆನೆಯಲು ಹೇಳು ನೀ ವಿಚಾರಿ ||

ದೇಶ ಸುತ್ತುವುದು ಕೋಷ ಒದುವುದು
ಸ್ವಜ್ಞಾನ ವೃದ್ಧಿಸಲಿಕ್ಕೋಸ್ಕರ
ಅದ ಬಿಟ್ಟು ಏಕಾಂಗಿಯಾಗಿ ಅಲೆಮಾರಿಯಾಗಲೆಂದಲ್ಲವೆಂದು ಹೇಳು ನೀ ವಿಚಾರಿ ||

ಕಾರ್ಯಕ್ಕೆ ಒಂದು ಕಾರಣ ಬೇಕು
ದುಶ್ಚಟಗಳ ದಾಸ್ಯತನದಲಿ  ನೆಪ ನೀಡುತ
ವಿರಹದಲಿ ಚಟಗಾರನಾಗಿರಲು ತೊರೆಯಲಾಗದು ಮೋಹದಲೆಂದು ಹೇಳು ನೀ ವಿಚಾರಿ ||

ಉಪ್ಪಿರದ ಊಟ ರುಚಿಯಲ್ಲ
ತಾಯಿಯಂತಹ ಬಂಧುವಿಲ್ಲ
ಉಪ್ಪು ನಾಲಿಗೆಗಾದರೆ ತಾಯಿ ಒಲುಮೆ ಬದುಕಿಗೆಂದು ಹೇಳು ನೀ ವಿಚಾರಿ ||

ಜಗಳಮಾಡದೆ ಬದುಕುವುದು
ಜೊತೆಯಾಗಿ ಸಾಗುವುದು
ಇಬ್ಬರ ನಡುವಿನಲ್ಲಿ ಸಾಮರಸ್ಯವಿರಲು ಸಾಧ್ಯವೆಂದು ಹೇಳು ನೀ ವಿಚಾರಿ ||

ಜಗಳಮಾಡದೆ ಬದುಕುವುದು
ಜೊತೆಯಾಗಿ ಸಾಗುವುದು
ಇಬ್ಬರ ನಡುವಿನಲ್ಲಿ ಸಾಮರಸ್ಯವಿರಲು ಸಾಧ್ಯವೆಂದು ಹೇಳು ನೀ ವಿಚಾರಿ ||

ಕಾರ್ಯವಾಸಿ ಕತ್ತೆಕಾಲು ಹಿಡಿಯುವುದು
ನೆರವು ಪಡೆದು ಮೇಲೆ ಹತ್ತುವುದು
ಗಮ್ಯಸ್ಥಾನ ತಲುಪಿದ ಮೇಲೆ ಹತ್ತಿದ ಏಣಿ ದೂಡಬಾರದೆಂದು ಹೇಳು ನೀ ವಿಚಾರಿ ||

ಪ್ರಥಮ ಚುಂಬನದಲಿ ದಂತ ಭಗ್ನವು
ಸೋಲೆ ಗೆಲುವಿನ ಸೋಪಾನವು
ಏನೇ ಆದರು ಮರಳಿ ಯತ್ನಿಸುತ ಸೋಲಿಗೆ ಅಂಜದಿರೆಂದು ಹೇಳು ನೀ ವಿಚಾರಿ ||

                                                                            ಗುರಿ ಮುಟ್ಟುವ ತನಕ
                                                                                    ವಿಚಾರಿ
                                                                                                          

12 comments:

  1. Replies
    1. ನಿಮ್ಮ ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

      Delete
  2. ಒಂದು ಒಳ್ಳೆಯ ಕವನ.

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

      Delete
  3. ಹೊಸ ಕಾವ್ಯನಾಮ ವಿಚಾರಿ ತುಂಬಾ ಅರ್ಥಗರ್ಭಿತವಾಗಿದೆ. ಮುಂದುವರೆಸಿರಿ...

    ಇಡೀ ಕವನ ಧಗಾಬಾಜಿಗಳಿಗೆ ಜಾಪಾಳ ಮಾತ್ರೆ... :-D

    ReplyDelete
    Replies
    1. ನಿಮ್ಮ ಪ್ರೋತ್ಸಾಹಕ್ಕೆ ಮತ್ತು ನನ್ನ ಭಾವನೆಗಳನ್ನ ಗುರುತಿಸುವುದಕ್ಕೆ ನನ್ನ ಧನ್ಯವಾದಗಳು. ಖುಷಿಯಾಗಿದೆ. Badari Sir

      Delete
  4. ವಿಚಾರಿ' tumbaa arthpoorna kaavyanaama ... nimma kavanavantu eegina samaajada ella vishyagala mele belaku chellide..... tumbaa chennaagide sir

    ReplyDelete
    Replies
    1. ನಿಮ್ಮ ಪ್ರೋತ್ಸಾಹಕ್ಕೆ ಮತ್ತು ನನ್ನ ಭಾವನೆಗಳನ್ನ ಗುರುತಿಸುವುದಕ್ಕೆ ನನ್ನ ಧನ್ಯವಾದಗಳು. ಖುಷಿಯಾಗಿದೆ JVM Sir

      Delete
  5. Replies
    1. ನಿಮ್ಮ ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

      Delete
  6. It really touches the heart.Each n every stanza has got useful meaning n gives some beautiful message to the reader.In one stanza within three lines you expressed regarding farming n farmer, so touching n having the reality.You are an up coming artist,excellent writing
    " God Bless You".

    ReplyDelete
    Replies
    1. Thanks a lot for your valuable feedback & Wishes... Noticed the meaning of poem & recognized my intentions.

      I am Pleasure to get such comment. @Vani Bhagwath

      Delete