Thursday, August 1, 2013

|| ಮರೆಮಾಚು ||

ಹುತ್ತ ಹಣೆದು ಹರೆಯುವ ಗೆದ್ದಲಹುಳವು
ಮೈಮೆರೆದು ಹಾತೆಯಾಗಿ ಹಾರುವುದು
ದೀಪ ಸುತ್ತುತ್ತಾ ರೆಕ್ಕೆ ಉದುರಿದಾಗ
ಅದುವೆ ಕರಿದಾದ ಹರೆಯುವ ಹೊಟ ||

ಕಾಲಕಾಲಕ್ಕೆ ಬದಲಾಗುವ ರೂಪ
ಗುರುತಿಸಲಾಗದ ಅಲೆದಾಟದ ವೇಷ
ಆದ ನ್ಯೂನತೆ ಅಂಟಿದ ಕಪ್ಪುಚುಕ್ಕೆ
ಕಳೆದ ವೇಳೆಯ ಪುನರಾವರ್ತನೆ ಸಾಧ್ಯವಿಲ್ಲ ||

ಅಡಿಕೆ ಕದ್ದಾಗ ಹೋದ ಮಾನವು
ಆನೆ ಕೊಟ್ಟರೂ ಮರಳದು
ಏನು ಮಾಡದೆ ಮರ್ಯಾದೆ ಹೋದರು
ಮಾತಿರದ ನಾಚಿಕೆಯಲಿ ಮುಖವೆತ್ತಲಾಗದು ||

ಮಾಡದ ಪಾಪಕೆ ಪ್ರಾಯಶ್ಚಿತವು
ಗುರುತಿನಾರೋಪಿ ಪಟ್ಟದ ಬಿಂಬಿತವು
ಉತ್ತಮ ವ್ಯಕ್ತಿತ್ವದಲಿ ಗೋಚರಿಸಿದಾಗ
ಹಿಂದಿನದು ಸ್ಥಿರವಾಗದು ಮರೆಮಾಚಿದಾಗ ||

8 comments:

  1. olleya kavite. chandaydu.

    ಅಡಿಕೆ ಕದ್ದಾಗ ಹೋದ ಮಾನವು
    ಆನೆ ಕೊಟ್ಟರೂ ಮರಳದು
    ಏನು ಮಾಡದೆ ಮರ್ಯಾದೆ ಹೋದರು
    ಮಾತಿರದ ನಾಚಿಕೆಯಲಿ ಮುಖವೆತ್ತಲಾಗದು nice lines

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

      Delete
  2. Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

      Delete
  3. ಹರೆಯುವ ಹೊಟ ತುಂಬಾ ಚೆನ್ನಾಗಿ ಮೂಡಿಬಂದಿದೆ.

    ReplyDelete
  4. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

    ReplyDelete
  5. >> ಅಡಿಕೆ ಕದ್ದಾಗ ಹೋದ ಮಾನವು
    ಆನೆ ಕೊಟ್ಟರೂ ಮರಳದು
    ಏನು ಮಾಡದೆ ಮರ್ಯಾದೆ ಹೋದರು
    ಮಾತಿರದ ನಾಚಿಕೆಯಲಿ ಮುಖವೆತ್ತಲಾಗದು ||<< ಇಷ್ಟವಾದ ಸಾಲುಗಳು :-) ಕವನವೂ ಚೆನ್ನಾಗಿದೆ

    ReplyDelete
    Replies
    1. ನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು

      Delete