ತುಸುಗೆಂಪು ಆಗಸವು
ಕೋಪದಲಿ ಮುನಿಸಿರಲು
ಆ ರವಿಯ ಇರುವಿಲ್ಲದೆ
ಬಾನಿನ ಮಡಿಲು ತುಂಬುವ
ಭಾಸ್ಕರನು ಬರುತಾನೆ ಎಂದು
ಇಳೆಯಲ್ಲಿನ ಜೀವಿಗಳು ಕಾಯುತ
ನಿಶಾಚರಿಗಳಿಗೆ ವಿದಾಯ ಹೇಳಲು
ಬೆಳ್ಳು ಮೂಡುತಿರಲು ಹರುಷದಲಿ
ದಿನಚರಿಗೆ ಅಣಿಯಾಗುತಿರುವವರಿಗರಲ್ಲಾ
ಶುಭೋದಯದ ಸಮಯದಲಿ
ಶುಭದಿನದ ಶುಭ ಕಾಮನೆಗಳು
ಎಂತಹ ಲಯವಿರುವ ರಚನೆಯಿದು.
ReplyDeleteಧನ್ಯವಾದಗಳು ಬದರಿ ಸಾರ್
Delete