ನೋಡ ಹೊರಟಿರುವ
ಆ ಜೀವದ ಶಾಂತಿಗೆ
ಬೇಕಿದೆ ಉತ್ತರಕ್ರಿಯೆ
ಪಾಪ ಪುಣ್ಯಗಳ ಹೊತ್ತು
ಜನಗಳ ಶಾಪ ಸ್ತುತಿಯ
ಹೊಣೆಗಾರ ಹೊರಟಿರಲು
ಚಿತೆಯ ಸುತ್ತ ಮಂದಿಗಳು
ಋಣವ ತೀರಿಸಲು ಮುಂದಾದ
ಮಕ್ಕಳು ತಿರುಗುವ ಮೂರ್ಸುತ್ತು
ತುಂಬಿದ ಮಡಕೆಯ ತೂತಿನಲಿ
ಸುರಿದು ಒಡೆದಂತೆ ಈ ಬದುಕು
ಕಷ್ಟದಲಿ ಬಾರದ ನೆರೆಯವರು
ಕಣ್ಣಲ್ಲೇ ಹೇಳುವ ನೀರಿನ ವಿದಾಯ
ಒಡನಾಡಿ ನೆಂಟರ ರೋದನ
ಅವಲಂಬಿತ ಜೀವಗಳ ಅಕ್ರಂದನ
ಗ್ರಹಗಳ ಸಂಧಿಗಳಿಗುಂಟು ಹೋಮ
ಹವಿಸ್ಸಿನ ಆಹುತಿಯು ಹವನದಲಿ
ಪಾಪಗಳ ಆಗರ ಈ ಪಾಪಿ ಜೀವ
ಅಗ್ನಿಗೆ ಆಹುತಿಯು ಹೆಣವಾದ ದೇಹ
ಸ್ವರ್ಗದ ಬಾಗಿಲು ತೆಗೆಯುವುದು
ಉತ್ತರಾಯಣದ ಪರ್ವ ಕಾಲದಲಿ
ಹೀಗಾಗಿ ಸತ್ತಾಗ ಮಾಡುವ ಕ್ರಿಯೆಗೆ
ಉತ್ತರಕ್ರಿಯೆಯೆಂದೇ ಹೆಸರಿಸುವರು
No comments:
Post a Comment