Tuesday, March 17, 2015

ಆಗಸದ ತುಂಬೆಲ್ಲ
ರಂಗೋಲಿ ಹಾಕಲು
ಚುಕ್ಕಿಯಿಟ್ಟ ಚಂದ್ರಮನು
ಚಿಂತಿಸುತ್ತಾ ಮರೆಯಾದ
ಅವನನ್ನು ಹುಡುಕಲು
ಬಾನು ತುಂಬುವ ಭಾಸ್ಕರನು
ಅಂಬೆಗಾಲಿಡುತ ಬಂದಿರಲು
ಆಕಾಶದಿ ಅಳಿಸಿದ ರಂಗೋಲಿ
ಮನೆಯಂಗಳದಿ ಅರಳಿತು

2 comments:

  1. ಮತ್ತೆ ರಾತ್ರಿಗೆ ಅದೇ ಚುಕ್ಕಿಗಳಾಟ!

    ReplyDelete
    Replies
    1. ಧನ್ಯವಾದಗಳು ಬದರಿ ಸಾರ್

      Delete