Tuesday, March 24, 2015

ದಿನ ಜೀವನದ ಹೊಲಿಕೆ

ಬೆಳಗಿನ ಮುಂಜಾನೆಯೆಂದರೆ
ಹೂವಿನಂತ ಬಾಲ್ಯವು
ಸೂರ್ಯನ ಸುಡು ಶಾಖ
ಯವ್ವನದ ಪರಾಕಾಷ್ಠೆಯು
ಕೆಂಪಾದ ಇಳಿ ಸಂಜೆಯೋ
ಸಾಕೆನ್ನುವ ಸುಕ್ಕಾದ ಮುಪ್ಪು
ಕರಿ ರಾತ್ರಿಯ ಯವು
ಕಲ್ಪನೆಯ ಸ್ವರ್ಗರಕವು
ಮರುದಿನದ ಬೆಳಗೆಂದರೆ
ಮರುಜನ್ಮ ನಂಬಿಕೆಯ ಕುರುಹು

3 comments:

  1. ದಿನದ ಆಗೋಹೋಗುಗಳನು ಮಾನವ ಸಹಜ ಜೀವನ ಯಾನಕ್ಕೆ ಸಮೀಕರಿಸಿದ ಪುಟ್ಟ ಕವನ.

    ReplyDelete
  2. ವಿನಾಯಕ್ .. ಮೊದಲ ಭೇಟಿ ನಿಮ್ಮ ಬ್ಲಾಗಿಗೆ....
    ಸುಂದರ ಕೆದಕುವ ಭಾವನೆಗಳಿಗೆ ಪದಗಳ ಗಹನತೆ ತುಂಬಿ ಸಾಲುಗಳಲ್ಲಿ ಪೇರಿಸುವ ಕವನಿಸೋ ಶೈಲಿ ಇಷ್ತ ಆಯ್ತು... ಮರುದಿನದ ಬೆಳಗೆಂದರೆ ..ಮರುಜನ್ಮ ನಂಬಿಕೆಯ ಕುರುಹು...!!!

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರೋತ್ಸಹಕ್ಕೆ... ನೀವು ಬರೆದ ಸಾಲುಗಳು ಮನದೋತ್ಸಾಹವನ್ನು ಇಮ್ಮಡಿಗೊಳಿಸಿತು.

      Delete