ಹೃದಯವೆಂಬ ದೀವಿಗೆಯಲಿ
ನೀನು ಬಂದು ಕೂತಿಹೆ
ಅದರ ಒಳಗಿನ ಕೋಣೆಯಲ್ಲಿ
ನಿನ್ನ ಒಲವದು ತುಂಬಿದೆ
ಸೋತ ಮನಸಿಗೆ ನೀಡು ಸಾಂತ್ವನ
ಗೆಲುವು ಎಂದೂ ನಿನ್ನದೇ
ಅರಳುವ ಮೊಗ್ಗದು ಹೂವು ಆಗದೇ
ಪ್ರೀತಿಯೆಂಬ ಹೆಸರಲಿ
ನನ್ನ ಮಾತು ಹಿಂಸೆಯಾದರೆ
ಮೌನಿಯಾಗಲು ಬೇಸರಿಸೆನು
ನಾನು ಎಂದೂ ಮುಖ್ಯವಲ್ಲ
ಬಯಸನೇನು ಬದುಕಲು
ನನ್ನ ಖುಷಿಗೆ ಇಡಲು ತರ್ಪಣ
ಧಾರೆ ಎರೆಯುವೆ ನೆಮ್ಮದಿನು
ನನ್ನ ಜೀವಕೆ ಕೊಡದೆ ಪ್ರಾಮುಖ್ಯತೆ
ನಿನ್ನ ಖುಷಿಗೆ ನೀಡು ಪ್ರಾಧಾನ್ಯತೆ
ನೀನು ನಗಲು ಸಂತೋಷ ಪಡಲು
ಸ್ವರ್ಗ ಭಾಸವು ನನ್ನ ಮನದಲಿ
ಗುರಿಯು ಒಂದೇ ಗುಣವು ಒಂದೇ
ನಾನು ರಮಿಸ ಬೇಕು ನಿನ್ನ ಖುಷಿಯಲಿ
ಬಿಡು ನೀನು ಯೋಚಿಸುವುದ
ತಿಕ್ಲುವಂತ ನನ್ನ ಬಗೆಗೆ
ಬೀಳದೆಂದು ಕೆಟ್ಟ ಕನಸು
ನಿದ್ರೆಗೆಂದು ತೊಡಕಾಗದು
ಕೊಡೆನು ಹಿಂಸೆ ಮಾತಾಡಿ ನಿನಗೆ
ಪಡುವೆ ಹಿಂಸೆಯ ಬದಲು ನಾನೇ
ನನ್ನ ಜೀವವಿರುವ ತನಕ
ಬದುಕುವೆ ನಿನ್ನ ಖುಷಿಗೆ ಸವೆಯುತ
ಸತ್ತ ಮೇಲು ಕೊಡೆನು ನಿನಗೆ
ಅಂತ್ಯಸಂಸ್ಕಾರದ ತೊಂದರೆಯನು
ನೀನು ಬದುಕಬೇಕು ಸ್ವಾವಲಂಬಿಯಾಗಿ
ನನ್ನಮ್ಮನ ನಂತರ ನಾ ಅಳಿಯಲು
ಅರ್ಪಣಾ ಗೀತೆಯ ಸಕಾರಾತ್ಮಕ ನಿಲುವು ಮತ್ತು ಇಲ್ಲಿ ತೋರುವ ಆಶಾಭಾವವು ಇತರರಿಗೂ ಮಾದರಿಯಾಗುವಂತಿದೆ.
ReplyDeleteಅರೇ, ಈ ತಿಕ್ಲುವಂತ ಪದ! ಎಲ್ಲಿಂದ ತಂದ್ರೀ? :-)
ಮೊದಲು ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು... ತಿಕ್ಲು ಎನ್ನುವ ಶಬ್ದವು ಆಡು ಭಾಷೆಯಗಿದೆ... ತಿಕ್ಲು = ಹುಚ್ಚ (Loose) ಎಂದರ್ಥ.
Delete