ದನ ಕರುಗಳ ಪಾಡು
ಹೇಗೆ ಬೆರೆಯಲಿ
ಜನರ ಜೊತೆಯಲಿ
ಹಣದ ಕೊರೆತೆಯೆ
ತೊಡಕು ಮಾಡುವುದು ||
ಎಲ್ಲರು ನೋಡುವ ದೊಡ್ಡಪ್ಪ
ಎಲ್ಲರಿಗು ಬೇಕು ದೊಡ್ಡಪ್ಪ
ಸಾಯಂ ಪ್ರಾತವು ದುಡಿತವೆ
ಗಳಿಸುವುದು ಹಾಳು ಹೊಟ್ಟೆಗಾಗಿ
ಮಾನ ಮುಚ್ಚುವ ತುಂಡು ಬಟ್ಟೆಗಾಗಿ
ಮುಗಿಯದು ಜೀವನದಲ್ಲಿ ಸ್ವೇದದ ಗೋಳು ||
ತಾನು ಬಲವಾದರೆ ಜಗ ಬಲವು
ಕಾಸಿದ್ದರೆ ಕರೆಯೋಲೆ ಕೊಡುವರು
ದುಡ್ಡಿದ್ದರೆ ಬದುಕೆಂದು ಮಾಡಿರುವರು
ನಗದನ್ನು ನೀಡುತ ಕೀರ್ತಿಗೆ ಸ್ಪರ್ಧೆಗಳು
ಅಂತಸ್ತು ನೋಡಿ ಮಾತನಾಡಿಸುವುದು
ಹನವಿದ್ದರೆ ಹೆಣಕೂಡ ಬಾಯಿ ಬಿಡುವುದು ||
ಪ್ರತಿಷ್ಠೆಯ ನೋಡಿ ಮೊಳವ ಹಾಕಲು
ಸಂಪತ್ತಿಲ್ಲದ ಈ ಮನುಜ ಬದುಕಲು
ಎದುರಿಸಬೇಕು ನೂರಾರು ಅಡೆತಡೆಗಳ
ಜೀವಕ್ಕಿಲ್ಲದ ಬೆಲೆಯು ನಿರ್ಜೀವಕೇಕೆ?
ತುಚ್ಛವಾಗಿ ಕಾಣುವ ಕ್ರಮಗಳೇಕೆ?
ಆಸೆ ಪಡಲು ಸಹ ಐಶ್ವರ್ಯವಿರಬೇಕೆ? ||
ಬದುಕಲ್ಲಿ ಬೆವರಿಳಿಸುವ ಬವಣೆಯು
ಜನರೆದುರು ಸ್ವಾರ್ಥ ತೋರಿಕೆಯು
ಸ್ವಂಥ ಬದುಕಿನ ಖುಷಿಯ ಮರೆತು
ಯಾಂತ್ರಿಕ ಜೀವನದಲಿ ಕುಳಿತು
ಏತಕೆ ತನ್ನತನವ ತೊರೆಯುವುದು
ಗಳಿಸಿದ ಹಣದಿಂದ ಹೆಸರುಳಿಯದು ||
ಗಳಿಸಿದ ಹಣದಿಂದ ಹೆಸರುಳಿಯದು ||
ಇದೇ ಬದುಕು. ಹಣಕ್ಕೆ ಇರುವ ಮರ್ಯಾದೆ ಮನುಷ್ಯನಿಗಿಲ್ಲ. ಇದ್ದಿದ್ದೇ ಆದರೆ ಪ್ರೀತಿ, ಪ್ರೇಮ ತನ್ನ ಅಥ ಕಳೆದುಕೊಂಡು, ಕಾಲು ಮುರಿದ ಹಕ್ಕಿಯಂತೆ ಮೂಲೆಯಲ್ಲಿ ಕೂರುತ್ತಿರಲಿಲ್ಲ. ಅದಕ್ಕೇ ಇರಬೇಕು ಜಿ.ಎಸ್. ಶಿವರುದ್ರಪ್ಪ ಹೇಳಿದರೆ, "ಯಾರು ಹಿತವರು ನಿನಗೆ ಈ ಮೂವರೊಳಗೆ ನಾರಿಯೋ, ಧಾರುಣಿಯೋ, ಬಹು ಧನದ ಸಿರಿಯೋ..." ಎಂದು. ಈಗ ಎಲ್ಲರಿಗೂ ಭೇಕಾಗಿರುವುದು ಒಂದೇ ಬಹು ಧನದ ಸಿರಿ.
ReplyDeleteಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.
ReplyDelete