Thursday, October 24, 2013

|| ಹೇಳಲಾಗದ ಭಾವ ||

ಬೋಳಾದ ಮನೆಯಲ್ಲಿ
ಹಾಳಾದ ಎದೆಯಿಂದ
ಮೂಕ ವೇದನೆಯ
ಕೊರಗೊಂದು ಕೇಳುತಿದೆ ||

ತಲ್ಲಣದ ತವರಲ್ಲಿ
ಮುಂಜಾನೆಯ ಬೆಳಕಲ್ಲಿ
ಉರಿಯುತಿದೆ ಬದುಕಲ್ಲಿ
ಸ್ಪೋಟಕದ ಬೆಂಕಿ ||

ಯೊಚಿಸಲು ಅನುಮಾನ
ಆಗಿರುವುದು ಅವಮಾನ
ನಾನೇನನ್ನು ಮಾಡುವುದು
ಆಗದಿರುವ ದೂಷಣೆಗೆ ||

ತಡೆಯಲಾಗದ ನೋವು
ಹೇಳಲಾಗದ ಭಾವ
ಮನಸಿನಲೆ ಕುದಿಯುತಿದೆ
ಮಾಡದಿರುವ ಪ್ರಮಾದಕೆ ||

ಎಲ್ಲರನು ತೊರೆಯಲು
ಊರಾಚೆ ಓಡೋಗಲು
ಪಾಳುಬಿದ್ದ ನಿವಾಸಲಿ
ಒಬ್ಬಂಟಿಯ ರೋದನೆ ||

2 comments:

  1. ಒಳ್ಳೆಯ ಪ್ರಯತ್ನ, ಇನ್ನಷ್ಟು ಹದಗೊಳಿಸಬಹುದಿತ್ತು ಕವನವನ್ನು. ಕೆಲವೆಡೆ ಲಯ ತಪ್ಪಿದೆ ಎನ್ನಿಸುತ್ತದೆ. ಪದಬಳಕೆ ಇನ್ನಷ್ಟು ಶುದ್ಧವಾಗಬಹುದಿತ್ತು.
    ಓಡೋಗಲು = ಓಡಿ+ಹೋಗಲು = ಓಡಿಹೋಗಲು?
    ಯೊಚಿಸಲು = ಯೋಚಿಸಲು?
    ಇನ್ನಷ್ಟು ಬರೆಯಿರಿ :)

    - ಪ್ರಸಾದ್.ಡಿ.ವಿ.

    ReplyDelete
    Replies
    1. ವಂದನೆಗಳು ತಮ್ಮ ತಿದ್ದುವಿಕೆಗೆ. ಹೀಗೆ ಪ್ರೋತ್ಸಾಹಿಸುತ್ತಿರಿ. ಪ್ರತ್ಯಾದಾನಕ್ಕೆ ನನ್ನ ಧನ್ಯವಾದಗಳು.

      Delete