Thursday, October 10, 2013

|| ಪ್ರಲೋಭನ ||

ಅರಸಿ ಬಂದೆ ನಿನ್ನ ಹೊರತು
ಬದುಕಲಿ ಸಂಗಾತಿಯಿಲ್ಲವೆಂದು
ತೊರೆದು ಹೋದೆ ನಿನ್ನ ಮರೆತು
ಮನೆಗೆ ಸಾಗಲು ತಿಳಿಯದೆಂದು ||

ನಿನ್ನ ಮೋಹ ನನ್ನ ಕರೆದು
ಎಳೆದು ತರುವುದು ಇಲ್ಲಿಗೆ
ಜಗಕೆ ಕಾಣದಂತೆ ಬರಲು
ಕುಣಿತ ಕಾಣುವುದು ಬಾಹ್ಯಕೆ ||

ನೋವ ನೀಗುವ ಕಾಸು ಕಳೆಯುವ
ನಿನ್ನಿಂದ ವಿಸ್ಮೃತಿಯಲಿ ದೂರಾದರೆ
ಕುಡಿತಕೆ ಒಳಗಿನಿಂದಲೆ ಪ್ರಚೋಧನೆ
ಬಿಡಲಾಗದ ನೀನೆ ನನ್ನ ಪ್ರಲೋಭನೆ ||

10 comments:

  1. ಕುಡಿತ ಮತ್ತು ಅವಳು - ಎರಡೂ ಬಿಡಿಸಿಕೊಳ್ಳಲಾರದ ಅಂಟುಗಳು ಕೆಲ ಕುಡುಕ ಕವಿಗಳಿಗೆ. ಉದಾಹರಣೆಗೆ, ನಮ್ಮ ಗಜಲ್ ದೊರೆ ಮಿರ್ಜಾ ಗಾಲೀಬ್.

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  2. ಒಂದು ಸುಂದರ ಕವನ.

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  3. Nanyakke eradu mukha, haage hennigoo olleyadanno madabavudu, kettaddannu madabahudu. Kudita keevala kettaddanu matra madutte............... joopana.....beautiful lines.

    ReplyDelete
    Replies
    1. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

      Delete
  4. ನೋವ ನೀಗುವ ಕಾಸು ಕಳೆಯುವ....chennagide...satyakke tumba hattiravada kavana

    ReplyDelete
  5. ಧನ್ಯವಾದಗಳು ನಿಮ್ಮ ಪ್ರತ್ಯಾದಾನಕ್ಕೆ.

    ReplyDelete
  6. ಪ್ರೀತಿಯೆಂದುಕೊಂಡು ಇದೇನಿದು ಹೊಸ ರಾಗ, ಬೆರೆಯುವ ಮೊದಲೆ ತೊರೆಯುವ ರಾಗ ಎಂದುಕೊಂಡೆ. ಇದು ಲೋಟದೊಳಗೆ ಬೆರೆಸುವ ಮಾತೆಂದಾದ ಮೇಲೆ ಅರ್ಥ ಸಿಕ್ಕಿತು! ಇನ್ನಷ್ಟು ಪಕ್ವತೆ ಬೇಕು ಎನಿಸಿತು. ಸರಳ ಪದಗಳಲ್ಲಿ ಕಾವ್ಯ ಕಟ್ಟುವ ಪ್ರಯತ್ನ ಹಿಡಿಸಿತು. ಮುಂದುವರೆಸಿ :)

    - ಪ್ರಸಾದ್.ಡಿ.ವಿ.

    ReplyDelete
  7. ಧನ್ಯವಾದಗಳು ತಮ್ಮ ಪ್ರತ್ಯಾದಾನಕ್ಕೆ. ಹೀಗೆ ಪ್ರೋತ್ಸಾಹಿಸುತ್ತಿರಿ.

    ReplyDelete