ನಡುವಿನಲಿ ಕುಳಿತಿದೆ
ಅಕ್ಕಿಯನು ಆರಿಸುತಿರುವ
ಉಂಗುರವಿಲ್ಲದ ಬೆರಳು ||
ನುಚ್ಚಿನಲಿ ನುಸುಳುತ್ತ
ಕಲ್ಲನ್ನು ಅರಸುತ್ತ
ಗೆರಸಿಯಲಿ ಹುಡುಕುತಿದೆ
ಸಿಂಗಾರವಿಲ್ಲದ ಕೊರಳು ||
ಕಾರ್ಪಣ್ಯದಲಿ ಕಾಣದಿರಲಿ ಕಷ್ಟದ ಕನಸು
ಅಗದು ಮೆರೆಯುವ ಐಶ್ವರ್ಯದ ನನಸು
ಬಾಳಿನಲಿ ಬಾರದ ಭಾಗ್ಯವನು ಬಯಸುವುದು
ಇಚ್ಛಿಸಬಾರದು ಕೈಗೆಟುಕದ ಮಾಯಾಮೃಗಕೆ ||
ಮಂಕಾಗಿ ಮುಕ್ತವಾದ ಬದುಕಿನಲಿ
ಯಾರ್ಯಾರ ಪರಿಚಾರಣೆ ಮಾಡಲಿ
ಇನ್ನು ಅರಿವಿಗೆ ಬಾರದ ಗುಪ್ತಗಾಮಿನಿ
ಅಸುನೀಗಿ ಆಗಬಾರದೇ ಮುಕ್ತ ಮುಕ್ತ ||
ಅಕಿಂಚನತೆಯಲಿ ಏನನ್ನು ಯೋಚಿಸಲಿ
ಪಡೆಯಲಾಗದು ಬೇಕಾದ ರಿಕ್ತತೆಯನು
ಹಾರುವ ಮನಸನ್ನು ಮಲಗಿಸುತ
ಕಜ್ಜದಲಿ ಮಗ್ನವಾಯ್ತು ಬಡತನದ ಬೆರಳು ||
ಕೆ.ಎಸ್.ನ ಭಾವಕ್ಕೆ ನಿಮ್ಮ ಸಾಲುಗಳ ನುಡಿ ನಮನ.
ReplyDeleteನಿಮ್ಮ ಪ್ರತ್ಯಾದಾನಕ್ಕೆ ಧನ್ಯವಾದಗಳು.
Delete