Saturday, September 7, 2013

|| ನೀನೆ ನನ್ನಯ ಬದುಕು ||

ನಾ ನಗಲು 
ನಿನ್ನ ಅನಿಸಿಕೆಯೇನು..?
ನೀನು ಅಳಲು
ಕೊರಗುವುದು ನನ್ನ ಮನಸು
ಮೂಡಿದ ಪ್ರೀತಿ
ಹೊಮ್ಮುವ ರೀತಿ
ಅರಳಿದ ಮೊಗವೆ ಗುರುತು...

ನಿನ್ನ ಹುಮ್ಮಸ್ಸು
ಕುಣಿಯುವ ವಯಸು
ಅನುಸರಿಸಲು
ಬಯಸುವ ಮನಸು
ನನ್ನ ಕಾಳಜಿ
ಮಾಡುವ ಬಾಜಿ
ನೀನೆ ನನ್ನಯ ಸ್ಪೂರ್ತಿ...

ಪಿಸುದನಿಯ ಮಾತು
ಉದ್ದೀಪನದ ಮದ್ದು
ತುಸು ಸ್ಪರ್ಷದ ಹೊತ್ತು
ಮೈಮರೆಯುವ ಮತ್ತು 
ಬೇಡ ಬೇರೇನು
ಬೇಕು ಇನ್ನೇನು
ನೀನೆ ನನ್ನಯ ಬದುಕು...

2 comments:

  1. ಪ್ರಾಸ ವಿಹೀನಮ್ ರುಚ್ಚಿಸದು ಲವ್ವೋಗೀತಂ! ಚೆನ್ನಾಗಿದೆ... ಚೆನ್ನಾಗಿದೆ...

    ReplyDelete