Thursday, September 5, 2013

|| ಶಿಕ್ಷಕರು ||

ನಾ ಒಲ್ಲೆ ಎನ್ನಲು ಕೈ ಹಿಡಿದು ಕರೆದ
ಹಠ ಮಾಡಲು ನಾಲ್ಕೇಟು ಹಾಕಿದ
ಗಡುಸಾದ ಗಿಡವನ್ನು ಬಗ್ಗಿಸಿದ
ತಪ್ಪಿನಲಿ ತಿದ್ದಿದ ಬುದ್ಧಿಯನ್ನ ಕಲಿಸಿದ
ನಾನಿಂದು ನಾನಾಗುವಂತೆ ಕಲಿಸಿದ
ಜಗದಲ್ಲಿ ಬದುಕುವ ಜ್ಞಾನವ ಅರುಹಿದ
ಬಿನ್ನೆತ್ತಿಯಿಂದ ತೇಪಣೆಯ ತನಕದ
ಕೀಟಲೆಯನ್ನು ಸಹಿಸಿ ಬೋಧಿಸಿದ
ನೆನೆಯುತ್ತ ನಮಿಸುವೆ ಮನದಾಳದಿಂದ
ಮರೆಯೆನು ಗುರುದೇವರಾದ ಶಿಕ್ಷಣದ ||

2 comments:

  1. ಗುರುವು ಮನೋನ್ವೇಷಕ - ಬುದ್ದಿ ಸಂವರ್ಧಕ - ಸಾಕ್ಷಾತ್ ಭಗವಂತ.

    ReplyDelete